Posts

Showing posts from March, 2022

Shri Guru Charitre - Chapter 34

Image
    ಅಧ್ಯಾಯ ೩೪ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ! ನಂತರ ಪರಾಶರರು ಕಾಶ್ಮೀರ ರಾಜನನ್ನು ಕುರಿತು, ರಾಜಾ ! ನಿನ್ನ ಮಗನಿಗೆ ಕೇವಲ 10 ವರ್ಷಗಳ ಆಯುಷ್ಯವಿದೆ. ಇನ್ನು ಎಂಟು ದಿನಗಳು ಮಾತ್ರ ಅದರಲ್ಲಿ ಬಾಕೀ ಉಳಿದಿವೆ. ಆದಕಾರಣ ನೀನು ಶಿವನಿಗೆ ಶರಣು ಹೋಗು! ರುದ್ರಾಧ್ಯಾಯವನ್ನು ಪಠಣ ಮಾಡುವದರಿಂದ ನಿನ್ನ ಮಗನ ಮೃತ್ಯು ಭಯ ದೂರಾಗುವದು !?” ಎಂದು ಹೇಳಿದರು. ರಾಜನು ತಕ್ಷಣವೇ ಬ್ರಾಹ್ಮಣರನ್ನು ಕರಿಸಿ, ಪುಣ್ಯ ವೃಕ್ಷ ದಡಿಯಲ್ಲಿ ರುದ್ರಾಭಿಷೇಕ ಮಾಡಿಸಿ, ಅದೇ ತೀರ್ಥದಿಂದ ಪ್ರತಿ ದಿನವೂ ಸುಧರ್ಮನಿಗೆ ಸ್ನಾನ ಮಾಡಿಸತೊಡಗಿದನು, 8ನೆಯ ದಿವಸ ಅರಸುನ ಮಗನು ಮೂರ್ಛಿತನಾದನು. ಪರಾಶರ ಮುನಿಯು ಅಭಿಮಂತ್ರಿತ ಜಲವನ್ನು ಪ್ರೋಕ್ಷಿಸಿದೊಡನೆಯೇ ಸುಧರ್ಮನು ಬದುಕಿದನು.ಎಲೈ ಸಾದ್ವಿಯೆ ! ಅದೇ ಕಾರಣಕ್ಕಾಗಿಯೇ ನಾವು ರುದ್ರಾಭಿಷೇಕದ ತೀರ್ಥವನ್ನು ನಿನ್ನ ಪತಿಗೆ ಪ್ರೋಕ್ಷಿಸಿ ಆತನ ಪ್ರಾಣ ಉಳಿಸಿದೆವೆಂದು, ಗುರುಗಳು ಸತಿಗೆ ತಿಳಿಸಿದರೆಂದು, ನಾಮಧಾರಕನಿಗೆ ಸಿದ್ಧಮುನಿಯು ತಿಳಿಸಿದನೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ 34ನೆಯ ಅಧ್ಯಾಯ ಮುಕ್ತಾಯವಾಯಿತು.

Shri Guru Charitre - Chapter 33

Image
  ಅಧ್ಯಾಯ ೩೩ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ! ಮರು ದಿವಸ ಆ ದಂಪತಿಗಳಿಬ್ಬರೂ ಗುರುಮಠಕ್ಕೆ ಬಂದು, ಗುರುಗಳಿಗೆ ನಮಸ್ಕರಿಸಿ, ಮಾತಾಡುತ್ತ ಕುಳಿತಾಗ, ಸತಿಯು ದೇವಾ ! ನಾನು ಅತೀ ದುಃಖದಲ್ಲಿದ್ದಾಗ ನಿನ್ನೆ ಒಬ್ಬ ಯತಿಗಳು ಬಂದು, ನನಗೆ ಹಿತೋಪದೇಶ ಮಾಡಿ, ಭಸ್ಮರುದ್ರಾಕ್ಷಿಗಳನ್ನು ಕೊಟ್ಟಿದ್ದರು ಎಂದು ಹೇಳಿದಳು. ಆಗ ಗುರುಗಳು ನಸುನಗುತ್ತ “ಹೌದೌದು ! ನಿನಗೆ ಭಸ್ಮ ರುದ್ರಾಕ್ಷಿಗಳನ್ನು ಕೊಟ್ಟ ಯೋಗಿಯೂ ನಾನೇ ಆಗಿದ್ದೇನೆ. ರುದ್ರಾಕ್ಷಿ ಧರಿಸಿದವರು ರುದ್ರ ಸಮಾನರಾಗುತ್ತಾರೆ. ಈ ಬಗ್ಗೆ ನಿಮಗೊಂದು ಕಥೆ ಹೇಳುತ್ತೇನೆ ಕೇಳಿರಿ ! ಕಾಶ್ಮೀರದ ಭದ್ರಸೇನ ರಾಜನಿಗೆ ಸುಧರ್ಮನೆಂಬ ಮಗನಿದ್ದನು, ಮಂತ್ರಿಯ ಮಗನೂ, ಸುಧರ್ಮನೂ, ಜೀವದ ಗೆಳೆಯರಾಗಿದ್ದರು, ಅವರು ಯಾವಾಗಲೂ ರುದ್ರಾಕ್ಷಿಗಳನ್ನು ಧರಿಸುತ್ತಿದ್ದರು. ಇದಕ್ಕೆ ಕಾರಣವೇನೆಂದು ರಾಜನು ಒಮ್ಮೆ ಪರಾಶರ ಋಷಿಗಳನ್ನು ವಿಚಾರಿಸಿದನು. ಪರಾಶರರು ಜ್ಞಾನದೃಷ್ಟಿಯಿಂದ ನೋಡಿ ಹೀಗೆ ಹೇಳಿದರು. ರಾಜಾ ! ಒಬ್ಬ ವೇಶೈಯು ವಿನೋದಕ್ಕಾಗಿ ಒಂದು ಕಪಿ ಹಾಗೂ ಒಂದು ಹುಂಜವನ್ನು ಸಾಕಿದ್ದಳು, ಅವಳು ಅವುಗಳ ಕೊರಳಲ್ಲಿ ರುದ್ರಾಕ್ಷಿಗಳನ್ನು ಕಟ್ಟಿದ್ದಳು, ಒಂದು ದಿವಸ ಶಿವಪುತ್ರನೆಂಬ ಒಬ್ಬ ವೈಶ್ಯನು ಆ ವೇಶೈಯ ಗಿರಾಕಿಯಾಗಿ ಬಂದನು, ಆತನ ಬಳಿಯಲ್ಲಿ ರತ್ನ ಖಚಿತವಾದ ಚಿಕ್ಕದೊಂದು ಶಿವಲಿಂಗವಿತ್ತು ಅದನ್ನು ನೋಡಿದ ಆ ವೇಶ್ಯಯು, ವೈಶ್ಯನಿಗೆ ಈ ರತ್ನಖಚಿತ ಲಿಂಗವನ್ನು ನೀವು ನನಗೆ ಕೊಟ್ಟರೆ, ಮೂರು...

Mana Mandiradolu nelasu / Raghvendra swamy devotional song

Image
ಮನ ಮಂದಿರದೊಳು ನೆಲೆಸೈ ಬಂದು ರಾಘವೇಂದ್ರಗುರು ದಯ ಮಾಡಿಂದು || ನಗ ನೋವಿನ ಗರವಿ ಮನವು ಭವ ಬಂಧನದಿ ಕಾಣದು ತಿಳಿವು| ಗುರುಪಾದ ಸೇವೆಯಿಮೂಡಲಿ ಅರಿವು ನಿಮ್ಮಯ ಕೃಪೆಯೇ ನಮಗಿಹ ಪರವು || ಬೃಂದಾವನವೇ ತವಸ್ಥಿರವಾಸವು ವೇಣೂಹರಿಯ ಧ್ಯಾನವೇ ನಿರತವು| ದೀನರು ಪಾಲಿಪ ಧೀಮಂತ ಭಾವವು ನಿಮ್ಮಯ ಕೃಪೆಯೇ ನಮಗಿಹ ಪರವು|| ವರಮಂತ್ರಾಲಯ ಪಾವನ ನಿಲಯ ಕರುಣ ಹೃದಯದಿ ನೀಡುವ ಅಭಯ ಮನದೊಳು ಮುಸಿಕಿದ ಈ ಕತ್ತಲೆಯ ನೀಗಿಸಿ ಬೆಳಕನು ನೀ ನೀಡು ಜಿಯ ||

Shri Guru Charitre - Chapter 32

Image
  ಅಧ್ಯಾಯ ೩೨ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ಯೋಗಿಯ ಉಪದೇಶದಿಂದ ಸತಿಯ ಮನಸ್ಸು ಸಮಾಧಾನ ಹೊಂದಿತು. ಅವಳು ನಾಲ್ಕೆಂಟು ಆಳುಗಳನ್ನು ಹಿಡಿದು, ನದಿಯ ದಂಡೆಯ ಹತ್ತಿರದ ಸ್ಮಶಾನದಲ್ಲಿ ಚಿತಾ ವ್ಯವಸ್ಥೆ ಮಾಡಿಸಿದಳು. ತಾನು ಸ್ನಾನ ಮಾಡಿ ಪೀತಾಂಬರ ಉಟ್ಟು ಕೊ೦ಡಳು. ಅರಿಷಿಣ ಕುಂಕುಮ ಮಂಗಳಾಭರಣಗಳಿಂದ ಅಲಂಕಾರ ಮಾಡಿಕೊಂಡಳು. ಸಿದಿಗೆ ಕಟ್ಟಿಸಿದಳು. ನಾಲ್ಕೆಂಟು ಜನ ಬ್ರಾಹ್ಮಣರು ಮುಂದೆ ಬಂದು, ಶವವನ್ನು ಸಿದಿಗೆಯ ಮೇಲೇರಿಸಿದರು. ಸತಿಯು ಶವದ ಮುಂಭಾಗದಲ್ಲಿ ತಾನೇ ಅಗ್ನಿಯನ್ನು ಹಿಡಿದುಕೊಂಡು, ನದೀ ತೀರದತ್ತ ಹೊರಟಳು. ಸತಿಯು ಸಹಗಮನ ಹೋಗುವದನ್ನು ನೋಡಲು ಜನರು ತಂಡತಂಡವಾಗಿ ಬೆಂಬತ್ತಿದರು. ಅವಳಿಗೊದಗಿದ ಸ್ಥಿತಿ ಕಂಡು ಮುತ್ತೈದೆಯರು ಮರುಗಿ ಕಣ್ಣೀರಿಟ್ಟರು. ಬ್ರಾಹ್ಮಣರು ಸ್ಮಶಾನದಂಚಿನಲ್ಲಿ ಸಿದಿಗೆಯನ್ನಿಳಿಸಿದರು. ಚಿತೆಗೆ ಸಕಲ ಸಿದ್ಧತೆಗಳೂ ಆಗಿದ್ದವು. ಸತಿಯು ಯೋಗಿಯ ಸಂದೇಶದಂತೆ, ಪತಿಯ ಶವಕ್ಕೆ ಮೈ ತುಂಬಾ ಭಸ್ಮ ಲೇಪಿಸಿದಳು. ಯೋಗಿ ಕೊಟ್ಟ ರುದ್ರಾಕ್ಷಿಗಳಲ್ಲಿ ಎರಡನ್ನು ಶವದ ಕಿವಿಗೆ ಹಾಕಿ, ಎರಡನ್ನು ಕೊರಳಲ್ಲಿ ಕಟ್ಟಿದಳು. ಬ್ರಾಹ್ಮಣರಿಗೆ ದಾನ ದಕ್ಷಿಣೆಗಳನ್ನು ಕೊಟ್ಟಳು. ಮುತ್ತೈದೆಯರಿಗೆ ಉಡಿ ತುಂಬಿ ಅರಿಷಿಣ ಕುಂಕುಮ ದಕ್ಷಿಣೆಗಳನ್ನಿತ್ತು ಅವರಿಂದ ಆಶೀರ್ವಾದ ಪಡೆದುಕೊಂಡಳು. ನಂತರ ನರಸಿಂಹ ಸರಸ್ವತಿಯತಿಗಳ ಆಶೀರ್ವಾದ ಪಡೆದುಕೊಂಡು ಬರುವೆನೆಂದು ತಿಳಿಸಿ, ಸಂಗಮದತ್ತ ನಡೆದಳು ಸಿದಿಗೆ ಹೊತ್ತ ಬ್ರಾಹ್ಮಣರನ್ನುಳಿದು, ಮಿಕ್ಕ...

Shri Guru Charitre - Chapter 31

Image
ಅಧ್ಯಾಯ ೩೧ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ಸತಿಯು ಹೀಗೆ ದುಃಖಿಸುತ್ತಿರಲು ಭಸ್ಮರುದ್ರಾಕ್ಷಿಗಳಿಂದ ಅಲಂಕೃತ ಯೋಗಿಯೊಬ್ಬರು ಬಂದು, ಮಗಳೇ ! ಯಾಕೆ ಸುಮ್ಮನೇ ಅಳುತ್ತಿರುವಿ ? ವಿಧಿ ಲಿಖಿತವು ಯಾರಿಗೂ ಬಿಟ್ಟಿದ್ದಲ್ಲ. ಪ್ರಪಂಚದಲ್ಲಿ ಹುಟ್ಟಿದವರೆಲ್ಲರೂ ಒಂದಿಲ್ಲೊಂದು ದಿನ ಸಾಯತಕ್ಕವರೇ ! ಈ ಸಂಸಾರದ ಸಂಬಂಧಗಳು ಸಹಿತ ಮಾಯೆಯಿಂದ ಕೂಡಿದಂತಿವೆ. ಸಮುದ್ರ ತೇಲುವ ಕಟ್ಟಿಗೆಗಳು, ಸ್ವಲ್ಪ ಸಮಯ ಒಂದಕ್ಕೊಂದು ಕೂಡಿಕೊಂಡಿದ್ದು, ಬಿರುಗಾಳಿ ಬಿಟ್ಟೋಡನೆಯೇ ದಿಕ್ಕಿಗೊಂದೊಂದು ಹೊರಟು ಹೋಗುವದಿಲ್ಲವೇ ? ಹಾಗಿದೆ ಈ ಗಂಡ, ಹೆ೦ಡತಿ, ತಂದೆ-ತಾಯಿ-ಬಂಧು-ಬಳಗ ಎಂಬ ಸಂಬಂಧ, ಪೂರ್ವಾರ್ಜಿತ ಕರ್ಮಫಲದಿಂದ ಎಲ್ಲೆಲ್ಲಿಯೋ ಹುಟ್ಟಿದ ದೇಹಗಳಿಗೆ ಸತಿ-ಪತಿಯರೆಂಬ ಸಂಬಂಧ ಬೆಳೆದು ಬಂದಿರುತ್ತದೆ ! ಆದರೆ ದೇಹಗಳಿಗೆ ಹುಟ್ಟಿ ನೊ೦ದಿಗೇ ಮರಣವೂ ಬೆಂಬತ್ತಿ ಬಂದಿರುತ್ತದೆ. ಅಜ್ಞಾನಿಗಳಾದವರು ಮಾತ್ರ ಇಂಥಾ ನಶ್ವರವಾದ ದೇಹವು ಪತನವಾದದ್ದಕ್ಕೆ ದುಃಖಪಡುತ್ತಾರೆ. ನೀನು ತಿಳಿದವಳಿರುವಿ ! ತಿರುಗಿ ಬರಲಾರದ ಪತಿಗಾಗಿ ದುಃಖಿಸದೇ ಈ ಸ೦ಸಾರ ಬಂಧನದಿಂದ ಜೀವನ್ಮುಕ್ತಿ ಪಡೆಯುವ ಮಾರ್ಗವನ್ನು ಮೊದಲು. ಹುಡುಕಿಕೋ !” ಎಂದು ಬುದ್ಧಿವಾದ ಹೇಳತೊಡಗಿದರು. ಸತಿಗೆ ಅವರ ಉಪದೇಶವು ಮನಕ್ಕೆ ನಾಟಿದ್ದರಿಂದ ಅವಳು ಚಟ್ಟನೆ ಎದ್ದು ಆ ಯೋಗಿಗಳಿಗೆ ನಮಸ್ಕರಿಸಿದಳು "ಸ್ವಾಮಿನ್ ! ನನಗಿನ್ನು ಯಾವ ಮಾರ್ಗ ??? ಎಂದು ಅಸಹಾಯಕಳಾಗಿ ಕೇಳಿದಳು. ಅದಕ್ಕೆ ಯೋಗಿಯು, 'ಸತಿಗೆ ಪತ...

Shri Guru Charitre - Chapter 30

Image
  ಅಧ್ಯಾಯ ೨೩ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕಾ ! ಗುರುಗಳ ಕೀರ್ತಿಯು ನಾಡಿನ ತುಂಬೆಲ್ಲ ಹಬ್ಬಿಹೋಗಿತ್ತು, ಗಾಣಗಾಪುರದ ಉತ್ತರ ದಿಕ್ಕಿನಲ್ಲಿ ಮಾಹುರ ಎಂಬ ಗ್ರಾಮದಲ್ಲಿ ಶ್ರೀಮಂತನಾದೆ ಒಬ್ಬ ಬ್ರಾಹ್ಮಣನಿದ್ದನು. ಆತನ ಹೆಸರು ಗೋಪಿನಾಥ ಆತನಿಗೆ ದತ್ತಾತ್ರಯನ ಆರಾಧನೆಯಿಂದ ಒಬ್ಬ ಮಗನು ಹುಟ್ಟಿದ್ದನು. ಆತನಿಗೆ ದತ್ತನೆಂದೇ ಹೆಸರಿಟ್ಟಿದ್ದರು. ದತ್ತನು ಪ್ರಾಪ್ತ ವಯಸ್ಕನಾದಾಗ, 'ಸತಿ' ಎಂಬ ಹೆಸರಿನ ಸುಶೀಲೆಯಾದ ಕನೈಯೊ೦ದಿಗೆ ಆತನ ಮದುವೆಯಾಯಿತು. ಅವರು ಕೆಲದಿನ ಸುಖ ಸಂಸಾರ ನಡಿಸುತ್ತಿದ್ದಂತೆಯೇ, ದತ್ತನಿಗೆ ದುರದೃಷ್ಟದಿಂದ ಕ್ಷಯರೋಗವು ಅ೦ಟಿಕೊ೦ಡಿತು. ತಂದೆ-ತಾಯಿಗಳು ನೀರಿನಂತೆ ಹಣ ಖರ್ಚುಮಾಡಿ, ಔಷಧೋಪಚಾರ ಮಾಡಿಸಿದರೂ ರೋಗಿಯು ಆರೋಗ್ಯವಂತನಾಗಲಿಲ್ಲ. ಕೊನೆಗೆ ದತ್ತನಿಗೆ ಗಂಟಲಲ್ಲಿ ಅನ್ನವೇ ಇಳಿಯದಂತಾಯಿತು. ದೇಹದಿಂದ ದುರ್ಗಂಧವು ಹೊರಡಲಾರಂಭಿಸಿತು, ಪತಿವೃತೆಯಾದ ಸತಿಯು ಸದಾ ಗಂಡನ ಆರೈಕೆಯಲ್ಲಿಯೇ ನಿರತಳಾಗಿರುತ್ತಿದ್ದಳು. ತನ್ನ ಪತಿಯು ಎಷ್ಟು ಆಹಾರ ಸೇವಿಸುತ್ತಿದ್ದನೋ, ಅಷ್ಟನ್ನೇ ಅವಳು ಸೇವಿಸತೊಡಗಿದಳು. ಹೀಗಾಗಿ ಅವಳ ದೇಹವು ಕೃಶವಾಯಿತು, ಅತ್ತೆಮಾವಂದಿರು ಅವಳಿಗೆ ದತ್ತನಿಂದ ಸ್ವಲ್ಪ ದೂರವಿರು' ಎಂದು ಸೂಚಿಸಿದರೂ ಅವಳು ಕೇಳುತ್ತಿರಲಿಲ್ಲ. ಶ್ರೀಮಂತರಾದ ತಂದೆ-ತಾಯಿಗಳು ದತ್ತನ ರೋಗ ನಿವಾರಣೆಗಾಗಿ ದೇವತಾಭಿಷೇಕ ಮಾಡಿಸಿದರು. ಬ್ರಾಹ್ಮಣರಿಗೆ ಭೋಜನಾದಿಗಳಿಂದ ಸಂತೃಪ್ತಿ ಮಾಡಿಸಿದರು, ಏನೂ ಪ್ರಯೋಜನವಾಗಲಿಲ್ಲ....

Shri Guru Charitre - Chapter 29

Image
  ಅಧ್ಯಾಯ ೨೯ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ! ಈ ಎಲ್ಲ ಚಮತ್ಕಾರಗಳನ್ನು ಕಣ್ಣಾರೆ ನೋಡುತ್ತ ಕುಳಿತಿದ್ದ ತ್ರಿವಿಕ್ರಮ ಯತಿಯು, ಗುರುದೇವಾ! ಆ ಪತಿತನಿಗೆ ಮೊದಲು ಜ್ಞಾನೋದಯವಾದದ್ದು ಹೇಗೆ ? ನಂತರ ಜ್ಞಾನಹೀನನಾಗಿ ಪತಿತನಾದದ್ದು ಹೇಗೆ ವಿವರಿಸಿ ಹೇಳಬೇಕೆಂದು ವಿನಂತಿಸಲು, ಗುರುಗಳು ಭಸ್ಮದ ಮಹಿಮೆಯನ್ನು ಈ ರೀತಿಯಾಗಿ ಹೇಳ ತೊಡಗಿದರು. ತ್ರಿವಿಕ್ರಮಾ ! ಮೊದಲು ನಾವು ಆ ಪತಿತನಿಗೆ ಪಂಚಾಕ್ಷರ ಮಂತ್ರದಿಂದ ಅಭಿಮಂತ್ರಿತ ಭಸ್ಮವನ್ನು ಪ್ರೋಕ್ಷಿಸಿದ್ದರಿಂದ, ಆತನಲ್ಲಿ ಜ್ಞಾನೋದಯವಾಗಿತ್ತು ಸ್ನಾನದಿಂದ ಆ ಭಸ್ಮವೆಲ್ಲ ಕ್ಷಾಲನವಾದಾಗ್ಗೆ ಮತ್ತೆ ಆತನು ಜ್ಞಾನ ಹೀನನಾದ ಪತೀತನಾಗಿ ಮಾರ್ಪಟ್ಟನು. ಭಸ್ಮಧಾರಣ ಮಾಡುವವನು ಪುನೀತನಾಗುವನು, ಬ್ರಹ್ಮಜ್ಞಾನಿಯಾಗುವನು, ಕೃತಯುಗದಲ್ಲಿ ವಾಮದೇವನೆಂಬ ಯೋಗಿಯು ಮೈ ತುಂಬಾ ಭಸ್ಮಲೇಪಿಸಿಕೊಂಡು, ಅರಣ್ಯದಲ್ಲಿ ಕಾಮಕ್ರೋಧ ರಹಿತನಾಗಿ ಸಂಚರಿಸುತ್ತಿದ್ದನು. ಆಗ ಒಂದು ರಾಕ್ಷಸವು ಆತನನ್ನು ತಿನ್ನಲೆಂದು ಮೈಮೇಲೆ ಎರಗಿತು ವಾಮದೇವನು ಧರಿಸಿದ್ದ ಭಸ್ಮದ ಕಣಗಳು ರಾಕ್ಷಸನ ಮೈಗೆ ಅಂಟಿದ ಕೂಡಲೇ ಅದಕ್ಕೆ ಜ್ಞಾನೋದಯವಾಯಿತು. ರಾಕ್ಷಸನು ವಾಮದೇವನಿಗೆ ನಮಸ್ಕರಿಸಿ, “ಮಹಾತ್ಮ! ನನ್ನನ್ನು ಉದ್ಧರಿಸು !” ನಿನ್ನ ಮೈಗಂಟಿದ ಭಸ್ಮವು ನನ್ನ ಮೈಗೆ ಅಂಟಿದೊಡನೆಯೇ, ನನಗೆ ಹಿಂದಿನ ಇಪ್ಪತ್ತೈದು ಜನ್ಮಗಳ ಅರಿವು ಉಂಟಾಗಿವೆ. 25ನೆಯ ಹಿಂದಿನ ಜನ್ಮದಲ್ಲಿ ನಾನು 'ದುರ್ಜಯ'ನೆಂಬ ಹೆಸರಿನ ಅರಸನಾಗಿದ್ದೆ. ಆಗ ನಾನು...

Shri Guru Charitre - Chapter 28

Image
  ಅಧ್ಯಾಯ ೨೮ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ಸಿದ್ಧಮುನಿಯು ಗುರುಚರಿತ್ರೆಯನ್ನು ಮುಂದುವರಿಸುತ್ತ ನಾಮಧಾರಕಾ ! ಗುರು ಮಹಿಮೆಯಿಂದ ಹಿಂದಿನ ಏಳು ಜನ್ಮಗಳ ಜ್ಞಾನಹೊಂದಿದ್ದ ಆ ಪತಿತನು ಗುರುಗಳನ್ನು ಕುರಿತು. “ಭಗವಾನ್ ! ಮೊದಲು ನಾನು ಬ್ರಾಹ್ಮಣ ಜಾತಿಯಲ್ಲಿದ್ದವನು, ಈ ಹೀನವಾದ ಚಾಂಡಾಲ ಕುಲದಲ್ಲಿ ಜನಿಸಿದ್ದೇಕೆ ?'' ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಗುರುಗಳು ಜೀವಿಗಳಿಗೆ ಕರ್ಮಾನುಸಾರವಾಗಿ ಉಚ್ಚ, ನೀಚ, ಜನ್ಮಗಳನ್ನು ನೀಡುವದು ವಿಧಿ ನಿಯಮವಾಗಿದೆ. ನೀನು ಬ್ರಾಹ್ಮಣನಾಗಿದ್ದಾಗ ತಂದೆ-ತಾಯಿ ಗುರುಹಿರಿಯರನ್ನು ಧಿಕ್ಕರಿಸಿ ನಡೆದದ್ದರಿಂದ, ಅಧಃಪತನ ಹೊಂದುತ್ತ ಕೊನೆಗೆ ಈ ಚಾಂಡಾಲ ಜನ್ಮದಲ್ಲಿ ಜನಿಸಬೇಕಾಯಿತು. ಆತ್ಮಸ್ತುತಿ ಮಾಡಿಕೊಳ್ಳುವವನು ಹೃದಯ ರೋಗದಿಂದ ಪೀಡಿತನಾಗುವನು, ತಂದೆ-ತಾಯಿಗಳನ್ನು ತ್ಯಜಿಸಿ, ಹೆಂಡತಿಯೊಂದಿಗೆ ಬೇರೆ ಸಂಸಾರ ಹೂಡಿ ಬಾಳುವ ಸ್ವಾರ್ಥಿಯು ಬೇಡರ ಕುಲದಲ್ಲಿ ಜನಿಸುವನು, ಬ್ರಹ್ಮಹತ್ಯಾ ಮಾಡಿದವನು, ಕ್ಷಯರೋಗದಿಂದ ಬಳಲಬೇಕಾಗುವದು. ಸರ್ಪ ಹಂತಕನು ಹಾವಾಗಿ ಹುಟ್ಟುವನು. ಪುಸ್ತಕ ಕದ್ದವನಿಗೆ ಕುರುಡುತನ ಬರುವದು. ವಸ್ತ್ರಾದಿಗಳನ್ನು ಕದ್ದವನಿಗೆ ಶ್ವೇತ ಕುಷ್ಠ ಆವರಿಸುವದು. ಹೀಗೆ ಪಾಪಕರ್ಮ ಮಾಡಿದವನಿಗೆ ನೀಚ ಜನ್ಮಗಳೂ, ಪುಣ್ಯ ಕರ್ಮ ಮಾಡಿದವನಿಗೆ ಉಚ್ಚ ಜನ್ಮಗಳೂ ದೊರೆಯುವದು ನಿಯಮವಾಗಿದೆ. ಈಗ ನಿನಗೆ ಪಾಪ ಪುಣ್ಯಾದಿ ಕರ್ಮಗಳಿಗೆ ಫಲವೇನಿರುತ್ತದೆ ? ಎಂಬುದರ ಸಂಪೂರ್ಣ ಜ್ಞಾನವಾಗಿದೆ. ಆದ್ದರಿಂದ ನೀನು ...

Shri Guru Charitre - Chapter 27

Image
    ಅಧ್ಯಾಯ ೨೭ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ! ಮುಂದೆ ನಡೆದ ಚಮತ್ಕಾರಕ ಘಟನೆಯನ್ನು ಕೇಳು ! ಅದೇ ವೇಳೆಗೆ ಸರಿಯಾಗಿ ಮಾತ೦ಗನೆ೦ಬ ಹೆಸರಿನ ಚಾಂಡಾಲ ಜಾತಿಯ ವ್ಯಕ್ತಿಯೊಬ್ಬನು ಮಠದೆದುರು ಬೀದಿಯಲ್ಲಿ ಹಾಯ್ದು ಹೋಗುತ್ತಿರುವದನ್ನು ಗುರುಗಳು ನೋಡಿದರು. ತಮ್ಮ ಶಿಷ್ಯನನ್ನೋಡಿಸಿ, ಆ ವ್ಯಕ್ತಿಯನ್ನು ಮಠದ ಆವರಣ ದೊಳಗೆ ಕರಿಸಿಕೊಂಡರು. ಚಾಂಡಾಲನು ದೂರದಲ್ಲಿ ನಿಂತುಕೊಂಡು, ಗುರುಗಳಿಗೆ ನಮಸ್ಕರಿಸಿದನು. ಗುರುಗಳು ಆತನಿಗೆ ““ಎಲೋ ನೀನು ಯಾರು?” ಎಂದು ಪ್ರಶ್ನೆ ಮಾಡಿದರು. ಆ ವ್ಯಕ್ತಿಯು ವಿನಯದಿಂದ ತಲೆ ಬಾಗಿ “ಬುದ್ದಿ ನಾನು ಅಂತ್ಯಜರವನು ನನ್ನ ಹೆಸರು ಮಾತಂಗ !'' ಎಂದು ಉತ್ತರಿಸಿದನು. ಗುರುಗಳು ತಮ್ಮ ಶಿಷ್ಯನಿಂದ ಆ ವ್ಯಕ್ತಿಯ ಎದುರಿಗೆ ಅಡ್ಡ ಸಾಲುಗಳಾಗಿ ಏಳು ಗೆರೆಗಳನ್ನು ಹಾಕಿಸಿದರು. ಆ ಚಾಂಡಾಲನಿಗೆ ಆ ಗ ಗಳನ್ನು ಒಂದೊಂದಾಗಿ ದಾಟುವಂತೆ ಆಜ್ಞೆ ಮಾಡಿದರು. ಮೊದಲ ಗೆರೆ ಯನ್ನು ದಾಟಿ ನಿಂತ ಆತನು, ನಾನು “ವರರಕ್ಷಕ'' ಎಂಬ ಹೆಸರಿನ ಕಿರಾತ ನೆಂದು ಹೇಳಿದನು. ಆತನಲ್ಲಿ ಸ್ವಲ್ಪ ಜ್ಞಾನ ಹುಟ್ಟಿದಂತಿತ್ತು ಎರಡನೆಯ ಗೆರೆಯನ್ನು ದಾಟಿದಾಗ ಅನೇಕ ಸಂಗತಿಗಳನ್ನು ಹೇಳತೊಡಗಿದನು. ಮೂರನೇ ಗೆರೆ ದಾಟಿದಾಗ ಆತನ ಜ್ಞಾನ ಇನ್ನೂ ವೃದ್ಧಿಗೊಂಡಿತು. 4ನೇ ಗೆರೆ ದಾಟಿದಾಗ “ಸ್ವಾಮೀ ನಾನು ಶೂದ್ರನು ! ನನ್ನ ವೃತ್ತಿಯ ಕಸಬು ಮಾಡಿಕೊಂಡಿರುವೆ'' ಎಂದು ಹೇಳಿದನು. 5ನೇ ಗೆರೆಯನ್ನು ದಾಟಿದಾಗ ತಾನು ಸೋಮದತ್ತನೆಂಬ ಹೆ...

Shri Guru Charitre - Chapter 26

Image
  ಅಧ್ಯಾಯ ೨೬ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ಶ್ರೀ ಗುರುಗಳು ಆ ಪಂಡಿತರಿಬ್ಬರನ್ನು ಕುಳ್ಳಿರಿಸಿಕೊಂಡು, “ಸನ್ಯಾಸಿಗಳೊಂದಿಗೆ ವಾದಕ್ಕಿಳಿಯುವದು ಸರಿಯಲ್ಲವೆಂದು ಬೇಕಾದಷ್ಟು ರೀತಿಯಿಂದ ತಿಳಿಸಿ ಹೇಳಿದರು. ನಿಮ್ಮ ವಿನಾಶಕ್ಕಾಗಿಯೇ ನಿಮಗಿಂಥ ದುರ್ಬುದ್ದಿ ಹುಟ್ಟಿದಂತಿದೆ !'' ಎಂದು ಸಿಟ್ಟು ಮಾಡಿ ನೋಡಿದರು. ಆದರೆ ಮದಾಂಧರಾದ ಆ ಪ೦ಡಿತರು ಗುರುಗಳ ಹಿತವಚನಗಳಿಗೆ ಕಿವಿಗೊಡದೇ, ನಾವು ನಿಮ್ಮ ಪ್ರವಚನ ಕೇಳಲು ಬಂದ ಭಕ್ತರಲ್ಲಾ; ವಾದದಲ್ಲಿ ನಿಮ್ಮನ್ನು ಗೆದ್ದು, ಜಯಪತ್ರಗಳನ್ನು ಸಂಪಾದಿಸಿಕೊಂಡು ಹೋಗಲು ಬಂದ ಪಂಡಿತೋತ್ತಮರು! ಹಾಳು ಹರಟೆಯಲ್ಲಿ ವೇಳೆ ಕಳೆಯುವದು ಸಾಕು ! ನಮ್ಮೊಂದಿಗೆ ವಾದ ಪ್ರಸಂಗ ನಡಿಸುವಿರೋ ? ಅಥವಾ, ಜಯಪತ್ರ ಬರೆದು ಕೊಡುವಿರೋ? ಇಷ್ಟನ್ನೇ ಉತ್ತರಿಸಿರಿ!” ಎಂದು ಸೊಕ್ಕಿನ ಮಾತುಗಳನ್ನೇ ಆಡತೊಡಗಿದರು. ಗುರುಗಳು ಇವರಿಗೆ ಹಿತೋಪದೇಶ ಮಾಡುವದು ಪ್ರಯೋಜನವಿಲ್ಲವೆಂದು ಮನಗಂಡು, ತಥಾಸ್ತು ! ನಿಮ್ಮ ಇಚ್ಛೆಯಂತೆಯೇ ಆಗಲಿ ! ನಿಮ್ಮೊಂದಿಗೆ ವಾದ ಮಾಡಲು ಒಬ್ಬ ವ್ಯಕ್ತಿಯನ್ನು ಕರೆಸುತ್ತೇವೆ. ಕುಳಿತುಕೊಳ್ಳಿ ! ಎಂದು ಹೇಳಿದರೆಂಬಲ್ಲಿಗೆ ಸಾರರೂಪ ಶ್ರೀ ಗುರುಚರಿತ್ರೆಯ 26ನೆಯ ಅಧ್ಯಾಯ ಮುಕ್ತಾಯವಾಯಿತು.

Shri Guru Charitre - Chapter 25

Image
  ಅಧ್ಯಾಯ ೨೫ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ! ಹಿಂದೆ ಬೀದರ ಪಟ್ಟಣದಲ್ಲಿ ಒಬ್ಬ ಮುಸಲ್ಮಾನ ದೊರೆಯಿದ್ದನು. ಆತನು ಬ್ರಾಹ್ಮಣರಿಗೆ ದ್ರವ್ಯದ ಆಸೆ ತೋರಿಸಿ, ಅವರ ಬಾಯಿಂದ ವೇದಮಂತ್ರಗಳನ್ನು ಪಠಿಸಿ, ಅವುಗಳ ಅರ್ಥ ಕೇಳುತ್ತಿದ್ದನು. ತನ್ನ ರಾಜ್ಯದಲ್ಲಿರುವ ಬ್ರಾಹ್ಮಣೋತ್ತಮರ, ರಾಜ ಸಭೆಯಲ್ಲಿ ತಮಗಿರುವ ವೇದ ವಿದ್ಯಾ ಪ್ರಾವಿಣ್ಯತೆಯನ್ನು ಪ್ರದರ್ಶನ ಮಾಡಿದರೆ, ಅಂಥವರಿಗೆ ಹೇರಳವಾದ ಬಹುಮಾನ ಕೊಡಲಾಗುವದೆಂದು ಊರೂರುಗಳಿಗೆ ಕರಪತ್ರ ಹಂಚಿಸಿದನು, ಹೀಗಾಗಿ ಕೆಲವು ಆಸೆಬುರಕ ಬ್ರಾಹ್ಮಣರು, ಯವನರ ಮುಂದೆ ಮಂತ್ರ ಪಠಣವು ನಿಷಿದ್ಧವೆಂಬುದು ಗೊತ್ತಿದ್ದರೂ ಧನದಾಸೆಗಾಗಿ ತಮ್ಮತನವನ್ನು ಕಳೆದುಕೊಂಡು, ಆ ಯವನ ದೊರೆಯೆದುರೆ ವೇದ ವಿದ್ಯೆಯನ್ನು ಪ್ರದರ್ಶಿಸತೊಡಗಿದರು. ಹೀಗಿರುತ್ತಿರಲೊಂದು ದಿನ, ಬಾದಶಹನ ಪ್ರಕಟಣೆಯ ವಾರ್ತೆಯನ್ನು ಕೇಳಿದ ಇಬ್ಬರು ಅನ್ಯ ರಾಜ್ಯದ ಬ್ರಾಹ್ಮಣ ಪಂಡಿತರು ಬಾದಶಹನ ದರ್ಬಾರಿಗೆ ಬಂದರು. ಅವರು ಬಾದಶಹನಿಗೆ ಮಜೂರೆ ಸಲ್ಲಿಸಿ, 'ಪ್ರಭೂ ! ನಾವು ವೇದ, ವೇದಾಂತ, ತರ್ಕ, ವ್ಯಾಕರಣ ಎಲ್ಲವನ್ನೂ ಬಲ್ಲ ಪಂಡಿತರು, ನಿಮ್ಮ ಆಸ್ಥಾನದಲ್ಲಿರುವ ಬ್ರಾಹ್ಮಣ ಪಂಡಿತರೊಂದಿಗೆ ನಾವು ವಾದ ಮಾಡಬೇಕೆಂಬ ಉದ್ದೇಶದಿಂದ ಬಂದಿದ್ದೇವೆ. ನಿಮ್ಮಲ್ಲಿ ಅಂಥ ಪಂಡಿತರಿದ್ದರೆ ನಮ್ಮೊಂದಿಗೆ ವಾದ ಪ್ರಸಂಗಕ್ಕೆ ಬಿಡಿರಿ ! ಅವರು ನಮ್ಮೊಂದಿಗೆ ವಾದಕ್ಕಿಳಿಯಲು ಅಂಜಿದರೆ, ಅಂಥ ಪಂಡಿತರಿಂದ ನಮಗೆ ಜಯಪತ್ರಗಳನ್ನು ಬರಿಸಿ ಕೊಡಿರಿ,” ಎಂದು ವಿ...

Shri Guru Charitre - Chapter 24

Image
  ಅಧ್ಯಾಯ ೨೪ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ಕೇಳು !ಗಾಣಗಾಪುರದ ಸಮೀಪದಲ್ಲಿಯೇ 'ಕುಮಸಿ' ಎಂಬ ಗ್ರಾಮವಿದೆ. ಅಲ್ಲಿ ತ್ರಿವಿಕ್ರಮ ಭಾರತಿ ಎಂಬ ಹೆಸರಿನ ಯತಿಯು ವಾಸವಾಗಿದ್ದನು, ಆತನು ತ್ರಿವೇದಗಳಲ್ಲಿ ಪಾಂಡಿತ್ಯ ಪಡೆದಿದ್ದನು, ಶ್ರೀ ಗುರುಗಳ ಕೀರ್ತಿಯು ಆ ನಾಡಿನಲ್ಲೆಲ್ಲ ಹರಡಿದಾಗ, ಆ ಯತಿಯು ಪಾಂಡಿತ್ಯ ಮದದಿಂದ ಇದೆಲ್ಲಾ ಡೋಂಗಿತನವೇ ಸರಿ !' ಎಂದು ಗುರುಗಳನ್ನು ಜರಿದು ಮಾತಾಡುತ್ತಿದ್ದನು. ಕರ್ಣಕರ್ಣಾಂತರವಾಗಿ ನೃಸಿಂಹ ಸರಸ್ವತಿ ಗುರುಗಳಿಗೆ ಆ ವಿಷಯ ತಿಳಿಯಿತು. ಅವರು ಆ ತ್ರಿವಿಕ್ರಮ ಯತಿಯನ್ನು ಕಾಣಲು ತಾವೇ ಕುಮಸಿಗೆ ಹೊರಟರು. ಗ್ರಾಮಾಧಿಪತಿಯು ಗುರುಗಳ ಈ ಪ್ರಯಾಣಕ್ಕೆ ವೈಭವದ ಸಿದ್ಧತೆ ಮಾಡಿದನು. ಗುರುಗಳನ್ನು ಸಿಂಗರಿಸಿದ ಮೇಣೆಯಲ್ಲಿ ಕುಳ್ಳಿರಿಸಿ ಕೊಂಡು, ಸೈನ್ಯ ಸಮೇತನಾಗಿ ತಾನೂ ಗುರುಗಳೊಂದಿಗೆ ಕುಮಸಿಗೆ ಹೊರಟನು, ತ್ರಿವಿಕ್ರಮ ಭಾರತಿಯು ಪ್ರತಿನಿತ್ಯ ನರಸಿಂಹ ದೇವರ ಮಾನಸ ಪೂಜೆ ಮಾಡುತ್ತಿದ್ದನು. ಆದರೆ ಆ ದಿವಸ ಆತನ ಮನಸ್ಸು ಚಂಚಲವಾಯಿತು, ಎಷ್ಟೇ ಪ್ರಯತ್ನ ಮಾಡಿದರೂ ಚಿತ್ತದಲ್ಲಿ ನರಸಿಂಹ ದೇವರ ಮೂರ್ತಿ ನೆಲೆಗೊಳ್ಳದಾಯಿತು. ಹೀಗೇಕಾಗುತ್ತಿದೆಯೆಂದು ಆತನು ವಿಷಾದದಿ೦ದ ಕಳವಳಗೊಳ್ಳುತ್ತಿದ್ದಂತೆಯೇ ಗುರುಗಳು ಕುಮಸಿ ಗ್ರಾಮದಲ್ಲಿ ಪ್ರವೇಶ ಮಾಡಿದರು. ತ್ರಿವಿಕ್ರಮ ಭಾರತಿಗೆ ಗುರುಗಳು ತಾನು ನಿತ್ಯ ಆರಾಧಿಸುತಿದ್ದ ನರಸಿಂಹ ಮೂರ್ತಿಯಂತೆಯೇ ಗೋಚರಿಸಿದರು. ಆತನು ಭಕ್ತಿಪುಲಕಿತನಾಗಿ ಓಡಿ ಬಂದು ಗುರುಗ...

Shri Guru Charitre - Chapter 23

Image
  ಅಧ್ಯಾಯ ೨೩ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ಕೇಳು ! ಮರುದಿವಸ ಮುಂಜಾನೆ ತೋಟಿಗನೊಬ್ಬನು, ಬ್ರಾಹ್ಮಣನ ಎಮ್ಮೆಯನ್ನು ಭಾಡಿಗೆಗೆ ಕೇಳುವದಕ್ಕಾಗಿ ಅವನ ಮನೆಗೆ ಬಂದನು, ಬ್ರಾಹ್ಮಣನಿಂದ ಆ ಎಮ್ಮೆಯು ಈಗ ಒಂದೊಂದು ಹೊತ್ತಿಗೆ ಎರಡು ತಂಬಿಗೆ ಹಾಲು ಕರೆಯುತಿರುವ ವಿಷಯವು ತಿಳಿದು ಬಂತು. ಹಾಲು ಕರೆಯುತ್ತಿರುವ ಎಮ್ಮೆಯನ್ನು ಭಾಡಿಗೆಗೆ ದುಡಿಸಲಾರೆನೆಂದು ಬ್ರಾಹ್ಮಣನು ಸ್ಪಷ್ಟವಾಗಿ ತಿಳಿಸಿದನು, ತೋಟಿಗನು ಬ್ರಾಹ್ಮಣನ ಬರಡೆಮ್ಮೆಯು ಶ್ರೀ ಗುರುಗಳ ಕೃಪೆಯಿಂದ ಎರಡೆರಡು ತಂಬಿಗೆ ಹಾಲು ಹಿಂಡುತ್ತಿರುವ ವಿಷಯವನ್ನು ಇಡೀ ಗಾಣಗಾಪುರದ ತುಂಬಾ ಪ್ರಚಾರ ಮಾಡಿಬಿಟ್ಟನು. ಆ ಊರಿನ ಪಾಳೆಯಗಾರನಿಗೂ ಈ ಸುದ್ದಿ ಹತ್ತಿತು. ಆತನು ಸ್ವತಃ ಬ್ರಾಹ್ಮಣನ ಮನೆಗೆ ಬಂದು ಅದರ ಸತ್ಯತೆಯನ್ನು ನಿದರ್ಶನ ಮಾಡಿಕೊಂಡನು. ಗುರುಗಳು ದೈವೀ ಪುರುಷರೆಂಬ ಭಕ್ತಿಯು ಆತನಲ್ಲಿ ಉತ್ಪನ್ನವಾಯಿತು. ತಕ್ಷಣವೇ ತನ್ನ ಮನೆಯ ಪರಿವಾರದವರನ್ನೆಲ್ಲ ಕರೆದುಕೊಂಡು ಸಂಗಮ ಕ್ಷೇತ್ರಕ್ಕೆ ಬಂದನು. ಗುರುದರ್ಶನ ಪಡೆದು ಸಾಷ್ಟಾಂಗ ನಮಸ್ಕಾರ ಮಾಡಿ, “ಗುರುದೇವಾ! ನೀವು ಅಗಾಧ ಮಹಿಮರೆಂದು ಅರ್ಥಮಾಡಿಕೊಳ್ಳಲಾರದ ಪಾಮರರು ನಾವು ! ಭಕ್ತ ವತ್ಸಲರೆಂದು ಬಿರುದು ಪಡೆದ ಪರಮಾತ್ಮ ಸ್ವರೂಪರು ನೀವು !! ತಾವು ದಯವಿಟ್ಟು ನನ್ನದೊಂದು ವಿನಂತಿಯನ್ನು ಮಾನ್ಯ ಮಾಡಬೇಕು ! ತಮ್ಮ ಚರಣ ಧೂಳಿಯಿಂದ ಇಡೀ ಗಾಣಗಾಪುರವನ್ನು ಪವಿತ್ರಗೊಳಿಸಿ ನೀವು ಅಲ್ಲಿಯೇ ನೆಲೆಸಬೇಕು !” ಎಂದು ಪ್ರಾರ್ಥಿಸಿಕೊಂ...

ಒಗಟು ಬಿಡಿಸಿ (ಭಾಗ ೧)

Image
 ಒಗಟು ಬಿಡಿಸಿ  ಇಲ್ಲಿ ಕೆಲವು ಒಗಟು ಇದೆ. ಅದನು ಬಿಡಿಸಲೂ ಪ್ರಯತ್ನಿಸಿ. ನಿಮ್ಮ ಉತ್ತರವನ್ನು ಕಾಮೆಂಟನಲ್ಲಿ ಬರೆಯಿರಿ.  ೧.  ಬಾಲ್ಯದಲ್ಲಿ ಹಸಿರುಸೀರೆ, ಯೌವನದಲ್ಲಿ ಕೆಂಪುಸೀರೆ, ಮುಪ್ಪಿನಲ್ಲಿ ಕರಿಸೀರೆ. ನಾನ್ಯಾರು??? ೨. ಮರದಲ್ಲಿ ಹಬ್ಬುತ್ತದೆ, ಪೇಟೆಯಲ್ಲಿ ಮೆರೆಯುತ್ತದೆ, ಶುಭಕಾರ್ಯದಲ್ಲಿ ಮುಂದಿರುತ್ತದೆ. ಯಾರದು??? ೩. ಮೂರು ಕಾಲಿನ ರಾಣಿ, ಎಲ್ಲರ ಮನೆಯಲ್ಲಿ ಇರುತಿದೆ ಜಾಣೆ, ಹೊರೆ ಕಟ್ಟಿಗೆ ತಿಂತೀಯಾ, ಗಡಿಗೆ ನೀರು ಕುಡಿಯುತ್ತಿಯಲ್ಲೆ ಮಹಾರಾಣಿ. ಯಾರು?? ೪. ಕತ್ತಲು ಮನೆಯಲ್ಲಿ ಕಂಬ ಬಿದ್ದರೆ ನಮ್ಮಪ್ಪನು ಹುಡುಕಲಾರ ನಿಮ್ಮಪನು ಹುಡುಕಲಾರ. ಯಾರದು? ೫. ಮಗುವಾಗಿ ಹುಟ್ಟಿ ಚಪ್ಪರದೊಳಗೆ ನಿಂತೆ, ಹುಡುಗಿಯಾಗಿ ಬೆಳೆದು ಕೆಂಪೂಸೀರೆ ಉಟ್ಟೆ, ನಾನಿಲ್ಲದ ಮನೆಯಿಲ್ಲ. ಹಾಗಾದರೆ ನಾನು ಯಾರು? ೬.  ಅಂಗಿ ಮೇಲೆ ಅಂಗಿ, ಹದಿನಾರು ಅಂಗಿ, ಬಿಚ್ಚಿ ನೋಡು ತಂಗಿ, ಏನು ಹೇಳು ನಿಂಗಿ? ೭.  ಮುಳ್ಳುಮ್ಮನ ಹೊಟ್ಟೆಯಲ್ಲಿ ನೂರಾರು ಮಕ್ಕಳು. ಯಾರದು?? ೮.  ಬಿಳಿ ಹುಡುಗಿ ಮೇಲೆ ಗುದ್ದಿದಾಗ ಮನೆಯಲ್ಲಿ ಮಕ್ಕಳು. ಯಾರದು? ೯. ನದಿಗಳಿವೆ ನೀರಿಲ್ಲ, ಬೆಟ್ಟಗಳಿವೆ ಕಲ್ಲುಗಳಿಲ್ಲ. ಏನದು? ೧೦. ಮೇಲೆ ಹಸಿರು, ಒಳಗೆ ಕೆಂಪು, ತಿಂದರೆ ತಂಪು. ಏನದು?

Shri Guru Charitre - Chapter 22

Image
  ಅಧ್ಯಾಯ ೨೨ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ಮುಂದೆ ಕೇಳು ! ಶ್ರೀ ನರಸಿಂಹ ಸರಸ್ವತಿ ಗುರುಗಳು ಇಸ್ವಿ ಸನ್ 1439 ರಲ್ಲಿ ಗಾಣಗಾಪುರಕ್ಕೆ ಬಂದು, ಅಲ್ಲಿಗೆ ಸಮೀಪದಲ್ಲಿರುವ ಭೀಮಾ- ಅಮರಜಾ ಸಂಗಮದ ಬಳಿಯ ಔದುಂಬರ ವೃಕ್ಷದಡಿಯಲ್ಲಿ ಗುಪ್ತವಾಗಿ ಇರತೊಡಗಿದರು. ಮಧ್ಯಾಹ್ನ ಸಮಯದಲ್ಲಿ ಗಾಣಗಾಪುರಕ್ಕೆ ಭಿಕ್ಷೆಗಾಗಿ ಹೋಗುವ ಪದ್ಧತಿಯನ್ನಿಟ್ಟುಕೊಂಡಿದ್ದರು, ಆಗ ಗಾಣಗಾಪುರದಲ್ಲಿ ಅತೀ ಬಡವರಾದ ಬ್ರಾಹ್ಮಣ ದಂಪತಿಗಳಿಬ್ಬರು ಇರುತ್ತಿದ್ದರು. ಅವರ ಮನೆಯಲ್ಲಿ ಒಂದು ಹಳೆಯ ಬರಡೆಮ್ಮೆ ಇತ್ತು, ಹುಟ್ಟಿದಾರಭ್ಯದಿಂದಲೂ ಬಂಜೆಯಾಗಿದ್ದ ಆ ಎಮ್ಮೆಯನ್ನು ಆ ಬ್ರಾಹ್ಮಣನು ತೋಟದವರಿಗೆ ಕಪ್ಪಲೀ ಹೂಡಲು ಭಾಡಿಗೆಗೆ ಕೊಟ್ಟು ಅದರಿಂದಲೇ ನಿತ್ಯೋಪಜೀವನ ನಡೆಸುತ್ತಿದ್ದನು, ಭಾಡಿಗೆ ಸಿಗದ ದಿವಸ ಭಿಕ್ಷಾಟನೆಯಿಂದ ಅವರ ಉಪಜೀವನ ಸಾಗುತ್ತಿತ್ತು ಶ್ರೀ ಗುರುಗಳಿಗೆ ಬಡವರೆಂದರೆ ಬಲು ಪ್ರೀತಿ ! ಹೀಗಾಗಿ ನಿತ್ಯವೂ ಆ ಬಡಬ್ರಾಹ್ಮಣನ ಮನೆಗೆ ಭಿಕ್ಷೆಗೆ ಹೋಗುತ್ತಿದ್ದರು. ಒಂದು ದಿವಸ ಆ ಬ್ರಾಹ್ಮಣನ ಎಮ್ಮೆಯನ್ನು ಯಾರೂ ಭಾಡಿಗೆಗೆ ಒಯ್ದಿರಲಿಲ್ಲ. ಬ್ರಾಹ್ಮಣನು ಭಿಕ್ಷೆಗಾಗಿ ಊರಲ್ಲಿ ಹೋಗಿದ್ದನು. ಅದೇ ವೇಳೆಗೆ ಸರಿಯಾಗಿ ಗುರುಗಳು ಆ ಬ್ರಾಹ್ಮಣನ ಬಾಗಿಲಿಗೆ ಭಿಕ್ಷಾರ್ಥಿಗಳಾಗಿ ಬಂದರು. ಬ್ರಾಹ್ಮಣ ಪತ್ನಿಯು ಗುರುಗಳನ್ನು ಒಳಗೆ ಸ್ವಾಗತಿಸಿ, ಮಣಿ ಹಾಕಿ ಕೂಡ್ರಿಸಿದಳು. ಮತ್ತೂ ಗುರುಗಳಿಗೆ ನಮಸ್ಕರಿಸಿ ವಿನಯದಿಂದ, “ಸ್ವಾಮೀ ! ನಮ್ಮ ಯಜಮಾನರು ಮಧುಕರಿ ಬೇ...

Shri Guru Charitre - Chapter 21

Image
  ಅಧ್ಯಾಯ ೨೧ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕಾ | ಬ್ರಹ್ಮಚಾರಿಯು ಕೊನೆಯಲ್ಲಿ ಹೇಳಿದ ಮಾತು, ಆ ಬ್ರಾಹ್ಮಣ ಪತ್ನಿಗೆ ಸರಿ ಎನ್ನಿಸಿತು. ಅವಳು ಮಗುವಿನ ಶವವನ್ನು ಹೊತ್ತುಕೊಂಡು ಹೋಗಿ ಔದುಂಬರ ವೃಕ್ಷದಡಿಯಲ್ಲಿ ಹಾಕಿದಳು. ಗುರುವೇ! ನೀನೇ ನನ್ನ ಮಗನು ಶತಾಯುಷಿಯಾಗುವನೆಂದು ಅಭಯವಿತ್ತಿದ್ದಿ! ಈಗ ನೀನೇ ಅವನನ್ನು ಅಲ್ಪಾಯುಷ್ಯದಲ್ಲಿ ನಮ್ಮಿಂದ ಕಸಿದುಕೊಂಡು ಹೊರಟಿರುವಿಯಾ ? ನಾನು ನನ್ನ ಮಗನನ್ನು ಬಿಟ್ಟು ಕೊಡುವದಿಲ್ಲಾ ವಚನಭ್ರಷ್ಟನಾದ ನಿನ್ನ ಪಾದುಕೆಗಳಿಗೆ ತಲೆ ಅಪ್ಪಳಿಸಿ ನನ್ನ ಪ್ರಾಣ ಕೊಡುತ್ತೇನೆ !' ಎಂದು ರಂಭಾಟ ಮಾಡಿ ಅಳುತ್ತ ಗುರುಪಾದುಕೆಗಳಿಗೆ ಹಣೆಯನ್ನು ಜಜ್ಜತೊಡಗಿದಳು. ಹೊತ್ತು ಮುಳುಗಿತು. ಈ ಹಟಮಾರಿ ಹೆಂಗಸು ಮಗುವಿನ ಶವವನ್ನು ಸಂಸ್ಕಾರಕ್ಕೆ ಬಿಟ್ಟು ಕೊಡಲಾರಳೆ೦ದು ಬೇಸರ ಮಾಡಿಕೊಂಡು ಕೆಲವು ಜನರು ಹೊರಟು ಹೋದರು.  ರಾತ್ರಿಯಾಯಿತು. ಅವಳಿಗೆ ಸ್ವಲ್ಪ ನಿದ್ರೆಯ ಜೊಂಪು ಬಂದಂತಾಯಿತು. ಅವಳ ಸ್ವಪ್ನದಲ್ಲಿ ಗುರುಗಳು ಕಾಣಿಸಿಕೊಂಡು, ಅಮ್ಮಾ! ಯಾಕೆ ಸುಮ್ಮನೇ ನಮಗೆ ಅಪಕೀರ್ತಿ ನೀಡುವಿ ? ನಿನ್ನ ಮಗನು ಜೀವದಿಂದಿದ್ದಾನೆ ನೋಡು !” ಎಂದು ಮಗುವಿನ ಹಣೆಗೆ ಭಸ್ಮ ಲೇಪಿಸಿ ಹೊರಟು ಹೋದಂತಾಯಿತು. ಅವಳು ತಟ್ಟನೆ ಎಚ್ಚತ್ತು ಮಗುವಿನ ಶವದ ಕಡೆಗೆ ನೋಡಿದಳು, ಅವಳ ಮಗನು ನರಳುತ್ತ ಕೈಕಾಲುಗಳನ್ನೆಳೆದುಕೊಳ್ಳತೊಡಗಿದ್ದನು. ಅದನ್ನು ನೋಡಿ ತಾಯಿಗೆ ಅತ್ಯಾನಂದವಾಯಿತು. ಅವಳು ನಿದ್ರೆಯಲ್ಲಿದ್ದ ಗಂಡನನ್ನೆಬ್ಬಿಸಿ, ವಿಷ...

Shri Guru Charitre - Chapter 20

Image
  ಅಧ್ಯಾಯ ೨೦ || ಹರಿಃ ಓಂ ಶ್ರೀ ಗುರುಭ್ಯೋ ನಮಃ || ನಾಮಧಾರಕಾ | ಗುರುಗಳು ಗಾಣಗಾಪುರಕ್ಕೆ ಹೊರಟುಹೋದರು. 'ನರಸೋಬವಾಡಿಯಲ್ಲಿ ಅವರ ವಾಸ್ತವ್ಯ ಸ್ಥಿರವಾಗಿತ್ತು ಎಂಬ ಬಗ್ಗೆ ನಿನಗೆ ಇನ್ನೊಂದು ಉದಾಹರಣೆಯನ್ನು ಹೇಳುತ್ತೇನೆ ಕೇಳು! ಶಿರೋಳ ಗ್ರಾಮದಲ್ಲಿ ಇಬ್ಬರು ಬ್ರಾಹ್ಮಣ ದಂಪತಿಗಳಿದ್ದರು. ಅವರಿಗೆ ಐದು ಮಕ್ಕಳು ಹುಟ್ಟಿದರೂ ಶೈಶವಾವಸ್ಥೆಯಲ್ಲಿಯೇ ಮರಣ ಹೊಂದಿದವು. ಜ್ಯೋತಿಷಗಳಲ್ಲಿ ಇದಕ್ಕೆ ಕಾರಣವೇನೆಂದು ಕೇಳಿದಾಗ, ಅವರು “ಅಮ್ಮಾ! ನೀನು ಹಿಂದಿನ ಜನ್ಮದಲ್ಲಿ ಒಬ್ಬ ಬ್ರಾಹ್ಮಣನಲ್ಲಿ 100 ವರಹ ಸಾಲ ಪಡೆದು, ತಿರುಗಿ ಕೊಡಲಿಲ್ಲ. ಆತನು ಅದೇ ಚಿಂತೆಯಲ್ಲಿ ಸತ್ತು ಪಿಶಾಚಿಯಾಗಿದ್ದಾನೆ, ಆತನೇ ನಿನ್ನ ಮಕ್ಕಳ ಮೃತ್ಯುವಿಗೆ ಕಾರಣನಾಗಿದ್ದಾನೆ. ಈ ದೋಷ ಪರಿಹಾರವಾಗಬೇಕಾದರೆ, ನೀನು ಆ ಬ್ರಾಹ್ಮಣನ ಹೆಸರಿನಲ್ಲಿ ನೀನು 100 ವರಹಗಳನ್ನು ದಾನಮಾಡಬೇಕು ! ಹಾಗೂ ನರಸೋಬವಾಡಿಯಲ್ಲಿರುವ ಗುರುಪಾದುಕೆಗಳನ್ನು ಒಂದು ತಿಂಗಳ ಕಾಲ ಉಪವಾಸ ವೃತದೊಂದಿಗೆ ನಿತ್ಯ ಪೂಜೆ ಮಾಡಬೇಕು ! ಅ೦ದರೆ ಆ ದ್ರೋಹ ಪರಿಹಾರವಾಗಿ, ನಿಮಗೆ ಶತಾಯುಷಿಗಳಾದ ಮಕ್ಕಳು ಹುಟ್ಟುತ್ತಾರೆ' ಎಂದು ಭವಿಷ್ಯ ನುಡಿದರು, ಅದಕ್ಕೆ ಬ್ರಾಹ್ಮಣ ಪತ್ನಿಯು, ಸ್ವಾಮಿ! ನಾವು ಬಡಬ್ರಾಹ್ಮಣರು ನೂರು ವರಹಗಳು ನಮ್ಮ ಬಳಿಯಲ್ಲಿಲ್ಲ. ಹೇಗೆ ಮಾಡೋಣ ?'' ಎಂದು ಕೇಳಿದಳು. ಜ್ಯೋತಿಷಿಗಳು ಸ್ವಲ್ಪ ಯೋಚಿಸಿ, “ನೀವು ಗುರುಸೇವೆಯನ್ನಂತೂ ಮನಮೆಚ್ಚುವಂತೆ ಮಾಡಿರಿ ! ಆ ಗುರು ನಾಥನೇ ನಿಮ್ಮ ಪಾಪಕ್ಷಾ...

Shri Guru Charitre - Chapter 19

Image
  ಅಧ್ಯಾಯ ೧೯ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ! ಗುರುಗಳು ಸದಾ ಔದುಂಬರ ವೃಕ್ಷದ ಕೆಳಗೇ ಯಾಕೆ ಇರುತ್ತಿದ್ದರೆಂದರೆ, ಔದುಂಬರ ವೃಕ್ಷವು ಶ್ರೇಷ್ಠವಾದದ್ದೆಂದು ವೇದಗಳೂ ಸಹಿತ ವರ್ಣಿಸುತಿವೆ. ಹಿಂದೆ ಶ್ರೀಮನ್ ನಾರಾಯಣನು ಹಿರಣ್ಯ ಕಶ್ಯಪನ ವಧೆಗಾಗಿ ನರಸಿಂಹ ರೂಪವನ್ನು ತಾಳಿದನು. ಆ ರಾಕ್ಷಸನನ್ನು ಉಗುರುಗಳಿಂದ ಹೊಟ್ಟೆ ಹರಿದು ಕೊಂದನು. ಆಗ ಆ ರಾಕ್ಷಸನ ಹೊಟ್ಟೆಯಲ್ಲಿದ್ದ ವಿಷವು ನರಸಿಂಹನ ಉಗುರುಗಳಲ್ಲಿ ಸೇರಿಕೊಂಡು ತಾಪವಾಗತೊಡಗಿತು. ಆ ತಾಪ ನಿವಾರಿ ಸುವದಕ್ಕಾಗಿ ಲಕ್ಷ್ಮೀದೇವಿಯು ಔದುಂಬರ ಫಲಗಳನ್ನು ಆತನ ಉಗುರುಗಳಿಗೆ ಚುಚ್ಚಿದಳು. ಅದರಿಂದಾಗಿ ನರಸಿಂಹನ ತಾಪವು ಶಾಂತವಾಯಿತು. ನರಸಿಂಹನು ಪ್ರಸನ್ನಚಿತ್ತನಾಗಿ ಅಂಥ ಶ್ರೇಷ್ಠ ಫಲ ನೀಡಿದ ಔದುಂಬರದ ವೃಕ್ಷವನ್ನು “ನೀನು ಭೂಲೋಕದ ಕಲ್ಪವೃಕ್ಷವೆನಿಸು !'' ಎಂದು ಆಶೀರ್ವದಿಸಿದನು. ಅದಕ್ಕಾಗಿಯೇ ಗುರುಗಳು ಸದಾ ಔದುಂಬರ ವೃಕ್ಷದಡಿಯಲ್ಲಿ ವಾಸವಾಗಿರುತ್ತಿದ್ದರು.  ಕೃಷ್ಣಾ ಪಂಚಗಂಗಾ ಸಂಗಮದಲ್ಲಿಯ ಔದುಂಬರ ವೃಕ್ಷದಡಿಯಲ್ಲಿ ಗುರುಗಳು ವಾಸ ಮಾಡುತ್ತಿರುವಾಗ್ಗೆ ನಿತ್ಯ ಮಧ್ಯಾಹ್ನ ಅಲ್ಲಿ ಒಂದು ದೊಡ್ಡ ಸಮಾರಂಭವೇ ನಡೆಯುತ್ತಿತ್ತು, ಅರವತ್ನಾಲ್ಕು ಜನ ಯೋಗಿನಿಯರು ಗುರುಗಳಿದ್ದಲ್ಲಿಗೆ ಬಂದು, ನಾನಾತರದ ಪರಿಮಳ ಪುಷ್ಪ ಧೂಪ-ದೀಪಗಳೊಂದಿಗೆ ಅವರನ್ನು ಪೂಜಿಸಿ, ನಂತರ ಗುರುಗಳನ್ನು ಭಿಕ್ಷೆ ಗಾಗಿ ತಮ್ಮ ಸ್ಥಳಕ್ಕೆ ಕರೆದೊಯ್ಯುತ್ತಿದ್ದರು. ನಾನಾತರದ ಪಕ್ವಾನ್ನಗಳಿಂದ ಗುರುಗಳ...

Shri Guru Charitre - Chapter 17

Image
  ಅಧ್ಯಾಯ ೧೭ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕಾ ! ವೈಜನಾಥ ದಿಂದ ಹೊರಟ ಗುರುಗಳು ಕೃಷ್ಣಾತೀರದ ಭಿಲ್ಲವಡಿ ಗ್ರಾಮಕ್ಕೆ ಬಂದರು. ಅಲ್ಲಿ ಪಶ್ಚಿಮ ತೀರದಲ್ಲಿರುವ ಔದುಂಬರ ವೃಕ್ಷದ ಕೆಳಗೆ ಕುಳಿತು, ಗುಪ್ತವಾಗಿ ಚಾತುರ್ಮಾಸವನ್ನು ಕಳೆದರು, ಕರವೀರ ಕ್ಷೇತ್ರದಲ್ಲಿ ವೇದ ಪಂಡಿತನಾದ ಒಬ್ಬ ಬ್ರಾಹ್ಮಣನಿಗೆ ಬುದ್ಧಿಮಂದನಾದ ಮಗನು ಹುಟ್ಟಿದ್ದನು. ಆ ತರುಣನು ಎಷ್ಟೇ ಪ್ರಯತ್ನ ಪಟ್ಟರೂ ಆತನಿಗೆ ವಿದ್ಯೆ ಹತ್ತಲಿಲ್ಲ. ಊರ ಜನರೆಲ್ಲ ಆತನಿಗೆ 'ಧಡ್ಡನೆಂದು ನಿಂದಿಸತೊಡಗಿದರು. ತಂದೆ ತಾಯಿಯರೂ ಮರಣವಪ್ಪಿದರು. ಹೀಗಾಗಿ ಆ ವಿದ್ಯಾಹೀನ ತರುಣನು ಜನನಿಂದೆಯಿಂದ ಬೇಸತ್ತು, ಭಿಲ್ಲವಡೀ ಗ್ರಾಮಕ್ಕೆ ಬಂದನು. ಗ್ರಾಮದ ಅಧಿದೇವತೆಯಾದ ಭುವನೇಶ್ವರಿಯ ಮುಂದೆ, ಮೂರು ದಿವಸಗಳವರೆಗೆ ಉಪವಾಸ ಕುಳಿತನು. ಭುವನೇಶ್ವರಿಗೂ ತನ್ನ ಮೇಲೆ ಕೃಪೆ ಹುಟ್ಟಲಿಲ್ಲವೆಂದುಕೊಂಡು, ತನ್ನ ನಾಲಿಗೆಯನ್ನು ಕತ್ತರಿಸಿ ದೇವಿಯ ಪಾದಗಳಿಗರ್ಪಿಸಿದನು ಹಾಗೂ ದೇವಿಯ ಸಾಕ್ಷಾತ್ಕಾರವಾಗದಿದ್ದರೆ, ತನ್ನ ಶಿರಸ್ಸನ್ನೇ ದೇವಿಗರ್ಪಿಸುವ ಸಂಕಲ್ಪ ತೊಟ್ಟು, ನಿಶ್ಚಲವಾಗಿ ಕುಳಿತನು. ಆತನಿಗೆ ತೂಕಡಿಕೆ ಬಂದಂತಾಗಿ, ದೇವಿಯು ಆತನ ಸ್ವಪ್ನದಲ್ಲಿ ಕಾಣಿಸಿಕೊಂಡಳು ಹಾಗೂ ಆ ಬ್ರಾಹ್ಮಣನನ್ನು ಕುರಿತು, ಬ್ರಹ್ಮಚಾರಿಯೇ! ವಿನಾಕಾರಣ ನನಗೇಕೆ ತೊಂದರೆ ಕೊಡುವಿ? ಕೃಷ್ಣಾನದಿಯ ಆಚೆಯ ದಂಡೆಗಿರುವ ಔದುಂಬರ ವೃಕ್ಷದ ಕೆಳಗೆ ಒಬ್ಬ ಅವತಾರಿ ಪುರುಷ ಕುಳಿತಿದ್ದಾನೆ, ಆತನಿಂದ ನಿನ್ನ ಇಚ್ಛೆ ಪೂರ್ಣಗೊಳ್...

Shri Guru Charitre - Chapter 18

Image
  ಅಧ್ಯಾಯ ೧೮ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ! ಶ್ರೀ ಗುರು ಗಳು ಪಂಚಗಂಗಾ ಕೃಷ್ಣಾ ಸಂಗಮದಲ್ಲಿ ಹನ್ನೆರಡು ವರ್ಷ (1427-1439) ವಾಸವಾಗಿದ್ದರು. (ಈಗ ಈ ಸ್ಥಳವೇ ನರಸಿಂಹವಾಡಿಯಾಗಿದೆ) ಆಗ ದಿನಾಲೂ ಅವರವಾಡ ಗ್ರಾಮಕ್ಕೆ ಭಿಕ್ಷೆಗೆ ಹೋಗುತ್ತಿದ್ದರು. ಆ ಊರಲ್ಲಿ ವೇದಭ್ಯಾಸಿಯಾದ ಒಬ್ಬ ದರಿದ್ರ ಬ್ರಾಹ್ಮಣನಿದ್ದನು. ಆತನು ನಿತ್ಯದಲ್ಲಿ ಭಿಕ್ಷಾವೃತ್ತಿಯಿಂದ ಜೀವಿಸುತ್ತಿದ್ದನು, ಆತನ ಮನೆಯ ಅಂಗಳದಲ್ಲಿ ಒಂದು ಅವರೆಯ ಬಳ್ಳಿ ಇದ್ದಿತು, ಅದು ಮಾಳಿಗೆಗೆ ಹಬ್ಬಿಕೊಂಡು ಸದಾ ಕಾಲ ಹೂವು ಕಾಯಿಗಳಿಂದ ತುಂಬಿಕೊಂಡಿರುತ್ತಿತ್ತು ಬ್ರಾಹ್ಮಣನಿಗೆ ಭಿಕ್ಷೆ ದೊರೆಯದಿದ್ದಾಗ, ಆತನ ಮನೆಯವರೆಲ್ಲ ಆ ಅವರೆಯ ಕಾಯಿಯ ಪಲ್ಯದಿಂದಲೇ ಸಂತೃಪ್ತಿಪಡೆಯಬೇಕಾಗುತ್ತಿತ್ತು. ಹೀಗಿರುತ್ತಿರಲು ಒಂದು ದಿವಸ ಮಧ್ಯಾಹ್ನದ ವೇಳೆಗೆ ಗುರುಗಳು ಆ ಬ್ರಾಹ್ಮಣನ ಮನೆಗೆ ಭಿಕ್ಷೆಗೆ ಹೋದರು. ಗುರುಗಳನ್ನು ಕಂಡ ಬ್ರಾಹ್ಮಣ ದಂಪತಿಗಳು ಬಹು ಭಕ್ತಿಯಿಂದ ಗುರುಗಳನ್ನು ಸ್ವಾಗತಿಸಿ ಪಾದಪೂಜೆ ಮಾಡಿದರು. ತಮಗಾಗಿ ಸಿದ್ಧಪಡಿಸಿ ಇಟ್ಟುಕೊಂಡಿದ್ದ ಅವರೇ ಕಾಳಿನ ಪಲ್ಯವನ್ನೇ ಗುರುಗಳಿಗೆ ಭಿಕ್ಷೆ ನೀಡಿದರು. ಗುರುಗಳು ಅದರಿಂದಲೇ ತೃಪ್ತರಾಗಿ ನಿಮ್ಮ ದಾರಿದ್ರ ದೂರಾಗಲಿ !” ಎಂದು ಆಶೀರ್ವದಿಸಿದರು, ಮತ್ತೂ ಆ ಮನೆಯಿಂದ ಹೊರಗೆ ಬರುವಾಗ ಅಂಗಳದಲ್ಲಿದ್ದ ಆ ಅವರೆಯ ಬಳ್ಳಿಯನ್ನು ಬಡ್ಡೆಗೆ ಹಚ್ಚಿ ಮುರಿದೊಗೆದು ಬಂದು ಬಿಟ್ಟರು. ಬ್ರಾಹ್ಮಣನ ಹೆಂಡತಿಯು ಈ ಯತಿಗೆ ನಾವೇನು ಅನ್ಯಾ...

Shri Guru Charitre - Chapter 16

Image
  ಅಧ್ಯಾಯ ೧೬ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ! ಗುರುಗಳು ವೈಜನಾಥ ಕ್ಷೇತ್ರದಲ್ಲಿರುವಾಗ, ಒಂದು ದಿನ ಮುನಿ ವೇಷದ ಒಬ್ಬ ಬ್ರಾಹ್ಮಣನು ಅವರ ಬಳಿಗೆ ಬಂದು ನಮಸ್ಕರಿಸಿದನು. ಮತ್ತೂ ಭಕ್ತಿಯಿಂದ ಗುರುಗಳನ್ನು ಕುರಿತು, ''ಮಹಾತ್ಮಾ! ನಿನ್ನ ದರ್ಶನದಿಂದ ನಾನು ಪಾವನನಾದೆನು, ನಾನು ಬೇಕಾದಷ್ಟು ಶ್ರಮವಹಿಸಿ ತಪಸ್ಸನ್ನಾಚರಿಸಿದರೂ ನನಗೆ ಜ್ಞಾನೋದಯ ಅಥವಾ ಆತ್ಮಸಾಕ್ಷಾತ್ಕಾರಗಳು ದೊರೆಯದಾಗಿವೆ. ಸರ್ವ ಸಮರ್ಥನಾದ ನೀನೇ ನನಗೆ ಸರಿಯಾದ ಮಾರ್ಗದರ್ಶನ ಮಾಡಿ, ಉದ್ದರಿಸಬೇಕು !' ಎಂದು ಪ್ರಾರ್ಥಿಸಿಕೊಂಡನು. ಗುರುಗಳು ಕ್ಷಣಕಾಲ ಆತನನ್ನು ನಿರೀಕ್ಷಿಸಿ “ನೀನು ಗುರು ಇಲ್ಲದೆ ಮುನಿ ಆದದ್ದಾದರೂ ಹೇಗೆ?” ಎಂದು ಪ್ರಶ್ನೆ ಮಾಡಿದರು, ಅದಕ್ಕೆ ಆ ಬ್ರಾಹ್ಮಣನು ದುಃಖದಿಂದ ಸ್ವಾಮೀ ! ನನಗೊಬ್ಬ ಗುರುವು ಇದ್ದನು. ಆದರೆ ಆತನು ಬಹಳೇ ನಿಷ್ಟುರನಾಗಿದ್ದನು. ಮೇಲಿಂದ ಮೇಲೆ ಬಿರುನುಡಿಗಳನ್ನಾಡಿ ನನ್ನ ಮನಸ್ಸಿಗೆ ನೋವನ್ನುಂಟು ಮಾಡುತ್ತಿದ್ದನು, ನಾನೂ ನನ್ನ ಮೇಲೆ ಗುರುಕೃಪೆಯು ಇಂದು ಆದೀತು, ನಾಳೆ ಆದೀತು ಎಂದು ಯೋಚಿಸುತ್ತ ಬಹುದಿನಗಳವರೆಗೆ ಆತನ ಸೇವೆ ಮಾಡಿದನು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಅದಕ್ಕಾಗಿ ನನಗವನ ಮೇಲೆ ಸಿಟ್ಟು ಬಂತು ಸಾರಿಗೆಯ ಎತ್ತಿನಂತೆ ಇವನ ಸೇವೆ ಮಾಡುವದಕ್ಕಿಂತ ಸ್ವತಂತ್ರವಾಗಿ ಏನಾದರೂ ಪ್ರಯತ್ನ ಮಾಡಿದರಾಯಿತೆ೦ದುಕೊ೦ಡು ಆತನ ಆಶ್ರಮದಿಂದ ಹೊರಟು ಬಂದು ಹತ್ತೆಂಟು ವರ್ಷಗಳು ಗತಿಸಿಹೋದವು. ನಾನೇನೇ ಪ್ರಯತ...

Shri Guru Charitre - Chapter 15

Image
  ಅಧ್ಯಾಯ ೧೫ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ಶ್ರೀ ನರಸಿಂಹ ಸರಸ್ವತಿ ಗುರುಗಳು ವೈಜನಾಥ ಕ್ಷೇತ್ರದಲ್ಲಿ ಅದೇಕೆ ಗುಪ್ತವಾಗಿ ಉಳಿದರು ? ಹಾಗೂ ಅವರ ಜೊತೆಯಲ್ಲಿದ್ದ ಅವರ ಶಿಷ್ಯಂದಿರೆಲ್ಲ ಆಗ ಎಲ್ಲಿಗೆ ಹೋದರು ? ದಯವಿಟ್ಟು ವಿವರವಾಗಿ ತಿಳಿಸುವ ಕೃಪೆ ಮಾಡಬೇಕೆಂದು, ನಾಮಧಾರಕನು ಭಕ್ತಿ ಕುತೂಹಲಗಳಿಂದ ಪ್ರಶ್ನೆ ಮಾಡಲು, ಸಿದ್ಧಮುನಿಯು ಈ ರೀತಿಯಾಗಿ ಹೇಳತೊಡಗಿದನು. “ನಾಮಧಾರಕನೇ ! ದಿನೇ ದಿನೇ ಗುರುಗಳಿಗೆ ಭಕ್ತರ ಸಂಖ್ಯೆ ಬೆಳೆಯುತ್ತ ಹೊರಟಿತು. ಅವರು ಅವತಾರಿಕ ಪುರುಷರೆಂಬ ವಾರ್ತೆಯು ಎಲ್ಲೆಡೆಗೂ ಹಬ್ಬಿ ಹೋಗಿತ್ತು; ಹೀಗಾಗಿ ಜನರು ಅನೇಕ ಕಾಮನೆಗಳನ್ನು ಹೊತ್ತುಕೊಂಡು, ಗುರುಗಳಿಂದ ಅವುಗಳಿಗೆ ಅನಾಯಾಸವಾಗಿ ಫಲ ದೊರಕಿಸಿಕೊಳ್ಳಬೇಕೆಂಬ ಉದ್ದೇಶದಿಂದ, ಗುರುಗಳಿದ್ದಲ್ಲಿಗೆ ಹುಡುಕಿಕೊಂಡು ಬರತೊಡಗಿದರು. ಅಂಥವರಲ್ಲಿ ಸಾಧುಗಳೂ ಇರುತ್ತಿದ್ದರು; ಸ್ವಾರ್ಥಿಗಳೂ ಇರುತ್ತಿದ್ದರು. ಧೂರ್ತರಾದ ಕೆಲವರು ಸ್ವಾರ್ಥ ಸಾಧನೆಗಾಗಿ ಗುರುಗಳ ಸೇವಕರಾಗ ಹತ್ತಿದರು. ಇಂಥವರು ದೊರೆಯಲಾರದ ಫಲಗಳನ್ನು ಬಯಸಿ, ಸುಮ್ಮ ಸುಮ್ಮನೆ ಗುರುಗಳಿಗೆ ಪೀಡಿಸುತ್ತಿದ್ದರು. ಅದಕ್ಕಾಗಿಯೇ ಗುರುಗಳು ಕೆಲವು ದಿನ ಗುಪ್ತವಾಗಿ ಉಳಿಯಲು ಮನಸ್ಸು ಮಾಡಿದರು. ಯಾಕೆ೦ದರೆ ಆಸೆಯೆಂಬುದು ಬಲು ಕೆಟ್ಟದ್ದು....! ಅದಕ್ಕೆ ಮಿತಿ ಎಂಬುವದೇ ಇರುವದಿಲ್ಲ. ಪರಶುರಾಮನು ಕ್ಷತ್ರಿಯರಿಂದ ಭೂಮಂಡಲವನ್ನೆಲ್ಲ ಗೆದ್ದು ಬ್ರಾಹ್ಮಣರಿಗೆ ದಾನ ಮಾಡಿದರೂ ಸಹಿತ ಅವರ ಆಸೆ ಹಿ೦ಗಲಿಲ್ಲ. ಆತನು ಪಶ...

Shri Guru Charitre - Chapter 14

Image
  ಅಧ್ಯಾಯ ೧೪ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನು ಬಹುಭಕ್ತಿ ಕುತೂಹಲಗಳಿಂದ, ಸಿದ್ಧಮುನಿಗೆ ನಮಸ್ಕರಿಸಿ, “ಗುರುದೇವಾ ! ನರಸಿಂಹ ಸರಸ್ವತಿ ಸ್ವಾಮಿಗಳು, ಸಾಯಂದೇವನ ಮನೆಯಲ್ಲಿ ಮತ್ತೇನು ಮಾಡಿದರು. ನಾನು ಅವರ ಪುಣ್ಯ ಚರಿತ್ರೆಯನ್ನು ಸಂಪೂರ್ಣವಾಗಿ ಕೇಳುವದಕ್ಕೆ ಉತ್ಸುಕನಾಗಿದ್ದೇನೆ'' ಎಂದು ವಿನಂತಿಸಿಕೊಳ್ಳಲು ಸಿದ್ಧಮುನಿಯು “ನಾಮಧಾರಕನೇ ಕೇಳು ! ಅ೦ದು ಸಾಯಂದೇವನು ತನ್ನ ಮನೆಯಲ್ಲಿ ವಿಚಿತ್ರ ವೈಭವ, ಭಕ್ತಿಗಳೊಂದಿಗೆ ಗುರುಪೂಜೆ ಮಾಡಿದನು, ಅದರಿಂದ ಗುರುಗಳು ಆತನ ಮೇಲೆ ಸಂಪ್ರೀತರಾಗಿದ್ದರು. ಅವರು ಸಾಯಂದೇವನನ್ನು ಹತ್ತಿರ ಕರೆದು, “ನೀನು ವಂಶಪರಂಪರೆಯಾಗಿ ನಮ್ಮ ಭಕ್ತನಾಗಬೇಕು !'' ಎಂದು ಆಜ್ಞೆ ಮಾಡಿದರು. ಸಾಯಂದೇವನು ಗುರುವಾಣಿಯನ್ನು ಕೇಳಿ ಬಹಳ ಸಂತುಷ್ಟನಾದನು, ಗುರುಗಳನ್ನು ಪರಿ ಪರಿಯಿಂದ ಸ್ತುತಿಸಿ ಜಯಜಯಕಾರ ಮಾಡಿದನು. ''ಗುರುವೇ ! ನೀನು ನನ್ನ ವಂಶವನ್ನು ಉದ್ಧರಿಸುವದಕ್ಕಾಗಿ ಅವತರಿಸಿ ಬಂದ ನಾರಾಯಣನಾಗಿರುವಿ, ದಯವಿಟ್ಟು ನನ್ನ ವಂಶದ ಮುಂದಿನ ಪೀಳಿಗೆಯವರಿಗೂ ನಿನ್ನ ಮೇಲೆ ಅಪಾರ ಭಕ್ತಿ ಹುಟ್ಟುವಂತೆ ನೀನೇ ಅನುಗ್ರಹಿಸು ! ನೀನು ನರರೂಪದಲ್ಲಿದ್ದರೂ ವಿಶ್ವವ್ಯಾಪಿಯಾಗಿರುವಿ ! ವೇದಗಳು ಸಹಿತ ನಿನ್ನ ಮಹಿಮೆಯು ತಿಳಿಯದಾಗಿವೆ. ನಾನಂತೂ ಪಾಮರನು. ಹೊಟ್ಟೆಯ ಪಾಡಿಗಾಗಿ ಯವನ ದೊರೆಗೆ ಸೇವಕನಾದವನು. ಆ ಯವನನಾದರೋ ಬಹು ದುಷ್ಟನಾಗಿದ್ದಾನೆ. ಆತನು ಪ್ರತಿವರ್ಷ ಒಬ್ಬ ಬ್ರಾಹ್ಮಣನನ್ನು ಯಾವದಾದರೊಂ...

Shri Guru Charitre - Chapter 13

Image
  ಅಧ್ಯಾಯ ೧೩ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ಕೇಳು ! ಶ್ರೀ ನರಸಿಂಹ ಸರಸ್ವತಿ ಗುರುಗಳು ಪ್ರಯಾಗದಲ್ಲಿ ಕೆಲವು ದಿನ ಉಳಿದರು, ಅಲ್ಲಿ ಅವರಿಗೆ ಬಹಳಷ್ಟು ಜನ ಶಿಷ್ಯರಾದರು. ಅವರಲ್ಲಿ (1) ಮಾಧವ ಸರಸ್ವತಿ (2) ಕೃಷ್ಣ ಸರಸ್ವತಿ (3) ಬಾಲ ಸರಸ್ವತಿ (4) ಉಪೇಂದ್ರ ಸರಸ್ವತಿ (5) ಸದಾನಂದ ಸರಸ್ವತಿ (6) ಜ್ಞಾನಜ್ಯೋತಿ ಸರಸ್ವತಿ ಹಾಗೂ ಏಳನೆಯವನಾಗಿ ಸಿದ್ಧಯೋಗಿ ನಾಮದವನಾದ ನಾನು ಹೀಗೆ ಏಳು ಜನರು ಗುರುಗಳಿಗೆ ಅತ್ಯಂತ ಪ್ರೀತಿ ಪಾತ್ರರಾದ ಶಿಷ್ಯರಾಗಿದ್ದವು, ಪ್ರಯಾಗ ಕ್ಷೇತ್ರ ದಿಂದ ಹೊರಟ ಗುರುಗಳು ನಮ್ಮನ್ನೆಲ್ಲ ಸಂಗಡ ಕರೆದುಕೊಂಡು ದಕ್ಷಿಣ ದೇಶದ ತೀರ್ಥಗಳನ್ನೆಲ್ಲ ಸಂಚರಿಸುತ್ತ ತಮ್ಮ ಪೂರ್ವಾಶ್ರಮದ ಜನ್ಮ ಸ್ಥಳವಾದ ಕರಂಜ ನಗರಕ್ಕೆ ಆಗಮಿಸಿದರು, ಪೂರ್ವಾಶ್ರಮದ ತಂದೆ-ತಾಯಿ ಬಂಧು-ಬಳಗದವರಿಗೆಲ್ಲ ದರ್ಶನಕೊಟ್ಟರು. ಅನೇಕ ರೂಪಗಳನ್ನು ಏಕ ಕಾಲದಲ್ಲಿಯೇ ಧರಿಸಿ, ಎಲ್ಲರ ಮನೆಯಲ್ಲಿಯೂ ಭಿಕ್ಷೆ ಸ್ವೀಕರಿಸಿದರು. ಅವರ ಅಗಾಧ ಮಹಿಮೆಯನ್ನು ಕಂಡ ಭಕ್ತರು ಗುರುಗಳನ್ನು ಸಾಕ್ಷಾತ್ ವಿಷ್ಣು ಸ್ವರೂಪರೆಂದು ಹಾಡಿ ಹೊಗಳಿದರು. ತಾಯಿ-ತಂದೆಗಳು ಶ್ರೀ ಗುರುಗಳನ್ನು ಪೂಜಿಸುವಾಗ, ಗುರುಗಳು ತಾಯಿಗೆ ಶ್ರೀಪಾದ ಶ್ರೀವಲ್ಲಭ ಯತಿಗಳ ರೂಪದಲ್ಲಿ ಕಾಣಿಸಿಕೊಂಡು, ವಿಸ್ಮಯವನ್ನುಂಟು ಮಾಡಿದರು. ಅಂಬಿಕೆ ತನ್ನ ಪೂರ್ವಜನ್ಮದ ಘಟನೆಗಳನ್ನು ಸ್ಮರಣೆ ಬಂದು ಪತಿಯೆದುರು ಅವನ್ನೆಲ್ಲ ವಿವರವಾಗಿ ವರ್ಣಿಸಿ ಹೇಳಿದಳು, ತಂದೆ ತಾಯಿಗಳು ತಮಗೆ ಜೀವನ್ಮುಕ್ತ...

Shri Guru Charitre - Chapter 12

Image
  ಅಧ್ಯಾಯ ೧೨ ||ಹರಿಃ ಓಂ ಶ್ರೀ ಗುರುಭ್ಯೋನಮಃ ||  ನಾಮಧಾರಕನೇ ! ನರಹರಿಯು ತನ್ನ ತಾಯಿಯನ್ನು ಕುರಿತು “ಅಮ್ಮಾ! ಗ್ರಹಸ್ಥಾಶ್ರಮದ ನಂತರ ಸನ್ಯಾಸ ಸ್ವೀಕರಿಸಿದರಾಯಿತೆಂದು ಸಮಾಧಾನ ಮಾಡಿಕೊಳ್ಳುವದಕ್ಕೆ, ಈ ಮಾನವ ದೇಹವು ಚಿರಂಜೀವಿಯಾದದ್ದೆಂದು ಭಾವಿಸಿಕೊಂಡಿರುವಿಯಾ? ಈ ದೇಹವು ಹುಟ್ಟುವಾಗಲೇ ಮರಣವನ್ನು ಜೊತೆಯಲ್ಲಿ ಕಟ್ಟಿಕೊಂಡೇ ಬಂದಿರುತ್ತದೆ. ಯಮಧರ್ಮನು ಯಾವನಿಗೆ ಯಾವ ಸಮಯಕ್ಕೆ, ಮೃತ್ಯು ಪಾಶವನ್ನೆಸೆಯುತ್ತಾನೆಂಬುದನ್ನು ತರ್ಕಿಸಲಿಕ್ಕಾಗದು, ಜಗತ್ತಿನಲ್ಲಿರುವ ಜೀವ ರಾಶಿಗಳಲ್ಲಿ ಮಾನವ ಜನ್ಮವು ಬಹು ದುರ್ಲಭವಾದದ್ದು. ದೇವರು ಅನಾಯಾಸವಾಗಿ ಮುಕ್ತಿದಾಯಕವಾದ ನರಜನ್ಮವನ್ನು ನೀಡಿರುವಾಗ, ಕಾಲ ವಿಳಂಬ ಮಾಡದೇ ಅದನ್ನು ಸಾರ್ಥಕಪಡಿಸಿಕೊಳ್ಳುವದೇ ನಮ್ಮ ಗುರಿಯಾಗಬೇಕು ! ಯಾಕೆಂದರೆ ಮನುಷ್ಯನ ಆಯುಷ್ಯವು ತೂತು ಬಿದ್ದ ಕೊಡದಲ್ಲಿಯ ನೀರಿದ್ದಂತೆ. ಅದರಲ್ಲಿಯ ನೀರು ಕ್ಷಣ ಕ್ಷಣಕ್ಕೂ ಕಡಿಮೆಯಾಗುತಲೇ ಹೋಗುತ್ತದೆ. ಈ ಕೊಡವು ಇದೇ ವೇಳೆಗೆ ಬರಿದಾಗುತ್ತದೆಯೆಂಬುದು ಹೇಳಲಿಕ್ಕೆ ಬರುವದಿಲ್ಲ. ದೇಹಕ್ಕೆ ಆಯುಷ್ಯವಿರುವಾಗಲೇ ಬುದ್ಧಿವಂತರಾದವರು ಪುಣ್ಯಸಂಗ್ರಹ ಮಾಡಿಕೊಳ್ಳಬೇಕು. ನೀನು ದಯವಿಟ್ಟು ನನಗೆ ತೀರ್ಥಯಾತ್ರೆಗೆ ಹೊರಡಲು ಅನುಮತಿ ನೀಡು!'' ಎಂದು ವಿವರಿಸಿ ಹೇಳಿದನು. ಮಗನ ಬಾಯಿಂದ ಹೊರಟ ಆಧ್ಯಾತ್ಮಿಕ ಪ್ರವಚನದಂತಿದ್ದ ಮಾತುಗಳನ್ನು ಕೇಳಿ, ತಾಯಿಯು ಆತನಿಗೆ ನಮಸ್ಕರಿಸಿ ಈ ರೀತಿಯಾಗಿ ಕೇಳಿಕೊಂಡಳು. ಅಪ್ಪಾ!.... ನೀನು ಸಾಮಾನ್ಯ ಮನುಷ್ಯನಲ್ಲ...