Shri Guru Charitre - Chapter 34
ಅಧ್ಯಾಯ ೩೪
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ! ನಂತರ ಪರಾಶರರು ಕಾಶ್ಮೀರ ರಾಜನನ್ನು ಕುರಿತು, ರಾಜಾ ! ನಿನ್ನ ಮಗನಿಗೆ ಕೇವಲ 10 ವರ್ಷಗಳ ಆಯುಷ್ಯವಿದೆ. ಇನ್ನು ಎಂಟು ದಿನಗಳು ಮಾತ್ರ ಅದರಲ್ಲಿ ಬಾಕೀ ಉಳಿದಿವೆ. ಆದಕಾರಣ ನೀನು ಶಿವನಿಗೆ ಶರಣು ಹೋಗು! ರುದ್ರಾಧ್ಯಾಯವನ್ನು ಪಠಣ ಮಾಡುವದರಿಂದ ನಿನ್ನ ಮಗನ ಮೃತ್ಯು ಭಯ ದೂರಾಗುವದು !?” ಎಂದು ಹೇಳಿದರು. ರಾಜನು ತಕ್ಷಣವೇ ಬ್ರಾಹ್ಮಣರನ್ನು ಕರಿಸಿ, ಪುಣ್ಯ ವೃಕ್ಷ ದಡಿಯಲ್ಲಿ ರುದ್ರಾಭಿಷೇಕ ಮಾಡಿಸಿ, ಅದೇ ತೀರ್ಥದಿಂದ ಪ್ರತಿ ದಿನವೂ ಸುಧರ್ಮನಿಗೆ ಸ್ನಾನ ಮಾಡಿಸತೊಡಗಿದನು, 8ನೆಯ ದಿವಸ ಅರಸುನ ಮಗನು ಮೂರ್ಛಿತನಾದನು. ಪರಾಶರ ಮುನಿಯು ಅಭಿಮಂತ್ರಿತ ಜಲವನ್ನು ಪ್ರೋಕ್ಷಿಸಿದೊಡನೆಯೇ ಸುಧರ್ಮನು ಬದುಕಿದನು.ಎಲೈ ಸಾದ್ವಿಯೆ ! ಅದೇ ಕಾರಣಕ್ಕಾಗಿಯೇ ನಾವು ರುದ್ರಾಭಿಷೇಕದ ತೀರ್ಥವನ್ನು ನಿನ್ನ ಪತಿಗೆ ಪ್ರೋಕ್ಷಿಸಿ ಆತನ ಪ್ರಾಣ ಉಳಿಸಿದೆವೆಂದು, ಗುರುಗಳು ಸತಿಗೆ ತಿಳಿಸಿದರೆಂದು, ನಾಮಧಾರಕನಿಗೆ ಸಿದ್ಧಮುನಿಯು ತಿಳಿಸಿದನೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ 34ನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment