ಶ್ರೀ ಗುರು ಚರಿತ್ರೆ - ನಿತ್ಯ ಪಾರಾಯಣ
ಸರಳ ಶ್ರೀ ಗುರುಚರಿತ್ರೆ Playlist - https://youtube.com/playlist?list=PLpfNci0J7maf4mH29XDzAktR3t4CeMZaH ||ಶ್ರೀ ಗುರುಭೋ ನಮಃ ಹರಿ ಓಂ॥ ||ತ್ರಿಮೂರ್ತಿ ರೂಪಿಣೇ ದತ್ತಾತ್ರೇಯಾಯ ನಮಃ|| ಭಗವಂತನು ತನ್ನನ್ನು ನಂಬಿದ ಭಕ್ತರನ್ನು ಕಾಪಾಡಲು ಹಲವಾರು ಅವತಾರಗಳನ್ನು ತಾಳಿದ್ದಾನೆ. ಪ್ರಸಿದ್ಧವಾದ ದಶಾವತಾರಗಳಷ್ಟೇ ಅಲ್ಲದೆ ವ್ಯಾಸ, ಕಪಿಲ, ದತ್ತಾತ್ರೇಯ ಮೊದಲಾದ ಜ್ಞಾನಪದ ರೂಪಗಳನ್ನು ಲೋಕ ಕಲ್ಯಾಣಕ್ಕಾಗಿ ತಾಳಿದ ಪರಮಾತ್ಮನು ಈ ಕಲಿಯುಗದಲ್ಲಿಯೂ ತನ್ನ ಮಹಿಮೆಗಳನ್ನು ತೋರಿಸಿದ್ದಾನೆ. ಅತ್ರಿ ಋಷಿಗಳ ಪತ್ನಿ ಅನಸೂಯೆಯ ಪಾತಿವ್ರತ್ಯವನ್ನೂ ಮಣಿದು ಶಿಶು ರೂಪ ತಾಳಿದರು. ತ್ರಿಮೂರ್ತಿಗಳೂ ಒಂದೇ ರೂಪದಲ್ಲಿ ದತ್ತನಾಗಿ ಜ್ಞಾನ ಬೋಧೆಯನ್ನು ಮಾಡಿದರು. ಶ್ರೀ ದತ್ತಾತ್ರೇಯನು ಮತ್ತೆ ಕಲಿಯುಗದಲ್ಲಿ ಎರಡು ಅವತಾರಗಳನ್ನು ತಾಳಿದನು. ಶ್ರೀಪಾದ ವಲ್ಲಭ ಹಾಗೂ ಶ್ರೀ ನೃಸಿಂಹ ಸರಸ್ವತೀಯತಿಗಳೇ ಆ ರೂಪಗಳಾಗಿವೆ. ಈ ತ್ರಿಮೂರ್ತಿ ಸ್ವರೂಪಿಯಾದ ಶ್ರೀ ದತ್ತಾತ್ರೇಯನ ಮೂರು ಅವತಾರಗಳ ಮಹಿಮೆಯೇ ಪರಮ ಫಲಪ್ರದವಾದ ಪಾರಾಯಣ ಗ್ರಂಥವಾದ ಶ್ರೀಗುರುಚರಿತ್ರೆಯ ಕಥಾವಸ್ತುವಾಗಿದೆ. ಗುರುಚರಿತ್ರೆಯನ್ನು ಮೊದಲು ಹಳೆಗನ್ನಡ ಪದ್ಯಗಳಲ್ಲಿ ಸಾಖರೆ ವಂಶಜರಾದ ಸರಸ್ವತೀ ಗಂಗಾಧರರೆಂಬ ದತ್ತ ಭಕ್ತರು ರಚಿಸಿದರು. ಇದನ್ನು ಅನೇಕರು ಗದ್ಯ ರೂಪದಲ್ಲಿ ಪ್ರಕಟಿಸಿದ್ದಾರೆ. ಶ್ರೀಗುರು ಚರಿತ್ರೆಯು ಅಧ್ಯಾಯಗಳ ಪಾರಾಯಣ ಗ್ರಂಥ. ಇದನ್ನು ಪ್ರತಿ ಗುರುವಾರ ಪಠಿಸಿದರೆ ಒಂದು ವರ...