Sankshipta Guru Charitre in kannada
ಸರಸ್ವತಿ ಗಂಗಾಧರ ಗುರುಭಕ್ತನಿಗೊಲಿದು ಬಂದನಾ ಶ್ರೀದತ್ತ ಪರಿಪರಿತಾಪವ ಕೇಶವ ಕಳೆಯುತ ನಿಜಸುಖವಿತ್ತನು ಶ್ರೀದತ್ತ ಕಷ್ಟದಿಂದ ಕಂಗೆಡುವ ಬಾಲಕನ ಕಂಡ ಸಿದ್ಧಮುನಿ ಶ್ರೀದತ್ತ ದುಷ್ಟ ಭಾವನೆಯ ಬಿಟ್ಟು ಭಜಿಸಿದರೆ ಕೊಟ್ಟು ಕಾಯುವನು ಶ್ರೀದತ್ತ ನಿಂತು ನುಡಿವ ಯೋಗೀಂದ್ರನಂಘ್ರಯನು ಪಿಡಿದು ಕೇಳಿದ ಶ್ರೀದತ್ತ ಇಂತು ಕರುಣೆಯದು ಕೊನೆಗೆ ಬಂದಿತೇ ಪಾಲಿಸು ಪಾಲಿಸು ಶ್ರೀದತ್ತ ಆಲಿಸು ಕುವರನೆ ಶ್ರೀಗುರುಚರಿತೆಯ ಭವತಾರಕನವ ಶ್ರೀದತ್ತ ತೇಲುವ ಎಲ್ಲವ ಹಸಿವನು ಹಿಂಗಿಸಿ ಹರುಷದಿ ಕಾಯುವ ಶ್ರೀದತ್ತ ಇವನೇ ದತ್ತನು ಅನಸೂಯಾತ್ಮಜ ವಿಶ್ವನಿಯಾಮಕ ಶ್ರೀದತ್ತ ಭವತಿಯ ನೆವದಲಿ ವಿಪ್ರನ ಮಡದಿಗೆ ಸುತನಾದನು ತಾ ಶ್ರೀದತ್ತ ಶ್ರೀಪಾದ ಶ್ರೀವಲ್ಲಭ ನಾಮದಿ ಕುಲ ಉದ್ಧರಿಸಿದ ಶ್ರೀದತ್ತ ಕಾಪಿಡೆ ನಡೆದನು ಭಾರತ ಜನವನು ಯಾತ್ರೆಯ ನೆವದಿಂ ಶ್ರೀದತ್ತ ತೀರ್ಥಕ್ಷೇತ್ರಗಳ ಸುತ್ತಿ ಪತಿತರನು ಪಾವನಗೊಳಿಸಿದ ಶ್ರೀದತ್ತ ಸಾರ್ಥಕವಾದ ಗೋಕರ್ಣವ ನೋಡುತ ಕುರವದಿ ನಿಂತನು ಶ್ರೀದತ್ತ ಮಂದಮತಿ ಅಂಬಾಕುಮಾರನಿಗೆ ಜ್ಞಾನದಾತನು ಶ್ರೀದತ್ತ ಮಂದವಾಸರದ ಪ್ರದೋಷ ಪೂಜೆಯ ಮಹಿಮೆಯ ಹೇಳಿದ ಶ್ರೀದತ್ತ ಅಗಸಗ ಮುಂದಣ ಜನುಮದಿ ರಾಜ್ಯದ ಭೋಗವನಿತ್ತನು ಶ್ರೀದತ್ತ ಅಗಲದಂತಿರಲು ವಲ್ಲಭೇಶನ ಸಂಕಟ ಕಳೆದನು ಶ್ರೀದತ್ತ ವಚನದಂತೆ ಅಂಬಾ ಮಾಧವರಿಗೆ ಬಾಲಕನಾದನು ಶ್ರೀದತ್ತ ಉಚಿತಸಮಯ ಬರೆ ನಾಲ್ಕೂ ವೇದದ ಸಾರವ ಹೇಳಿದ ಶ್ರೀದತ್ತ ಅವಳೀತನಯರ ತಾಯಿಗೆ...

Comments
Post a Comment