Shri Guru Charitre - Chapter 26
ಅಧ್ಯಾಯ ೨೬
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ಶ್ರೀ ಗುರುಗಳು ಆ ಪಂಡಿತರಿಬ್ಬರನ್ನು ಕುಳ್ಳಿರಿಸಿಕೊಂಡು, “ಸನ್ಯಾಸಿಗಳೊಂದಿಗೆ ವಾದಕ್ಕಿಳಿಯುವದು ಸರಿಯಲ್ಲವೆಂದು ಬೇಕಾದಷ್ಟು ರೀತಿಯಿಂದ ತಿಳಿಸಿ ಹೇಳಿದರು. ನಿಮ್ಮ ವಿನಾಶಕ್ಕಾಗಿಯೇ ನಿಮಗಿಂಥ ದುರ್ಬುದ್ದಿ ಹುಟ್ಟಿದಂತಿದೆ !'' ಎಂದು ಸಿಟ್ಟು ಮಾಡಿ ನೋಡಿದರು. ಆದರೆ ಮದಾಂಧರಾದ ಆ ಪ೦ಡಿತರು ಗುರುಗಳ ಹಿತವಚನಗಳಿಗೆ ಕಿವಿಗೊಡದೇ, ನಾವು ನಿಮ್ಮ ಪ್ರವಚನ ಕೇಳಲು ಬಂದ ಭಕ್ತರಲ್ಲಾ; ವಾದದಲ್ಲಿ ನಿಮ್ಮನ್ನು ಗೆದ್ದು, ಜಯಪತ್ರಗಳನ್ನು ಸಂಪಾದಿಸಿಕೊಂಡು ಹೋಗಲು ಬಂದ ಪಂಡಿತೋತ್ತಮರು! ಹಾಳು ಹರಟೆಯಲ್ಲಿ ವೇಳೆ ಕಳೆಯುವದು ಸಾಕು ! ನಮ್ಮೊಂದಿಗೆ ವಾದ ಪ್ರಸಂಗ ನಡಿಸುವಿರೋ ? ಅಥವಾ, ಜಯಪತ್ರ ಬರೆದು ಕೊಡುವಿರೋ? ಇಷ್ಟನ್ನೇ ಉತ್ತರಿಸಿರಿ!” ಎಂದು ಸೊಕ್ಕಿನ ಮಾತುಗಳನ್ನೇ ಆಡತೊಡಗಿದರು. ಗುರುಗಳು ಇವರಿಗೆ ಹಿತೋಪದೇಶ ಮಾಡುವದು ಪ್ರಯೋಜನವಿಲ್ಲವೆಂದು ಮನಗಂಡು, ತಥಾಸ್ತು ! ನಿಮ್ಮ ಇಚ್ಛೆಯಂತೆಯೇ ಆಗಲಿ ! ನಿಮ್ಮೊಂದಿಗೆ ವಾದ ಮಾಡಲು ಒಬ್ಬ ವ್ಯಕ್ತಿಯನ್ನು ಕರೆಸುತ್ತೇವೆ. ಕುಳಿತುಕೊಳ್ಳಿ ! ಎಂದು ಹೇಳಿದರೆಂಬಲ್ಲಿಗೆ ಸಾರರೂಪ ಶ್ರೀ ಗುರುಚರಿತ್ರೆಯ 26ನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment