Shri Guru Charitre - Chapter 27

 

 

ಶ್ರೀ ಗುರು ಚರಿತ್ರೆ


ಅಧ್ಯಾಯ ೨೭

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ನಾಮಧಾರಕನೇ ! ಮುಂದೆ ನಡೆದ ಚಮತ್ಕಾರಕ ಘಟನೆಯನ್ನು ಕೇಳು ! ಅದೇ ವೇಳೆಗೆ ಸರಿಯಾಗಿ ಮಾತ೦ಗನೆ೦ಬ ಹೆಸರಿನ ಚಾಂಡಾಲ ಜಾತಿಯ ವ್ಯಕ್ತಿಯೊಬ್ಬನು ಮಠದೆದುರು ಬೀದಿಯಲ್ಲಿ ಹಾಯ್ದು ಹೋಗುತ್ತಿರುವದನ್ನು ಗುರುಗಳು ನೋಡಿದರು. ತಮ್ಮ ಶಿಷ್ಯನನ್ನೋಡಿಸಿ, ಆ ವ್ಯಕ್ತಿಯನ್ನು ಮಠದ ಆವರಣ ದೊಳಗೆ ಕರಿಸಿಕೊಂಡರು. ಚಾಂಡಾಲನು ದೂರದಲ್ಲಿ ನಿಂತುಕೊಂಡು, ಗುರುಗಳಿಗೆ ನಮಸ್ಕರಿಸಿದನು. ಗುರುಗಳು ಆತನಿಗೆ ““ಎಲೋ ನೀನು ಯಾರು?” ಎಂದು ಪ್ರಶ್ನೆ ಮಾಡಿದರು. ಆ ವ್ಯಕ್ತಿಯು ವಿನಯದಿಂದ ತಲೆ ಬಾಗಿ “ಬುದ್ದಿ ನಾನು ಅಂತ್ಯಜರವನು ನನ್ನ ಹೆಸರು ಮಾತಂಗ !'' ಎಂದು ಉತ್ತರಿಸಿದನು. ಗುರುಗಳು ತಮ್ಮ ಶಿಷ್ಯನಿಂದ ಆ ವ್ಯಕ್ತಿಯ ಎದುರಿಗೆ ಅಡ್ಡ ಸಾಲುಗಳಾಗಿ ಏಳು ಗೆರೆಗಳನ್ನು ಹಾಕಿಸಿದರು. ಆ ಚಾಂಡಾಲನಿಗೆ ಆ ಗ ಗಳನ್ನು ಒಂದೊಂದಾಗಿ ದಾಟುವಂತೆ ಆಜ್ಞೆ ಮಾಡಿದರು. ಮೊದಲ ಗೆರೆ ಯನ್ನು ದಾಟಿ ನಿಂತ ಆತನು, ನಾನು “ವರರಕ್ಷಕ'' ಎಂಬ ಹೆಸರಿನ ಕಿರಾತ ನೆಂದು ಹೇಳಿದನು. ಆತನಲ್ಲಿ ಸ್ವಲ್ಪ ಜ್ಞಾನ ಹುಟ್ಟಿದಂತಿತ್ತು ಎರಡನೆಯ ಗೆರೆಯನ್ನು ದಾಟಿದಾಗ ಅನೇಕ ಸಂಗತಿಗಳನ್ನು ಹೇಳತೊಡಗಿದನು. ಮೂರನೇ ಗೆರೆ ದಾಟಿದಾಗ ಆತನ ಜ್ಞಾನ ಇನ್ನೂ ವೃದ್ಧಿಗೊಂಡಿತು. 4ನೇ ಗೆರೆ ದಾಟಿದಾಗ “ಸ್ವಾಮೀ ನಾನು ಶೂದ್ರನು ! ನನ್ನ ವೃತ್ತಿಯ ಕಸಬು ಮಾಡಿಕೊಂಡಿರುವೆ'' ಎಂದು ಹೇಳಿದನು. 5ನೇ ಗೆರೆಯನ್ನು ದಾಟಿದಾಗ ತಾನು ಸೋಮದತ್ತನೆಂಬ ಹೆಸರಿನ ವೈಶ್ಯನೆಂದು ಹೇಳಿದನು. 6ನೇ ಗೆರೆ ಯನ್ನು ದಾಟಿ ನಿಂತು, ಸ್ವಾಮೀ! ನಾನು 'ಗೋದಾವರಿ' ಎಂಬ ಹೆಸರಿನ ಕ್ಷತ್ರಿಯನು, ಎಂದು ಹೇಳಿದನು. 7ನೇ ಗೆರೆಯನ್ನು ದಾಟಿದಾಗ, ತಾನು ವೇದವಿದ್ಯಾ ಪಾರಂಗತನಾದ ಅಧ್ಯಾಪಕ ಬ್ರಾಹ್ಮಣನೆಂದು ಹೇಳಿದನು. ಗುರುಗಳು ಆ ವ್ಯಕ್ತಿಯ ಮೈಗೆ ಅಭಿಮಂತ್ರಿಸಿದ ಭಸ್ಮವನ್ನು ಪ್ರೋಕ್ಷಣೆ ಮಾಡಿದರು. ಕೂಡಲೇ ಆತನಿಗೆ ಜ್ಞಾನೋದಯವಾಯಿತು. ಗುರುಗಳು ಆತನಿಗೆ ಪಂಡಿತರೊಂದಿಗೆ ವಾಗ್ವಾದ ಮಾಡು !'' ಎಂದು ಹೇಳಿದೊಡನೆಯೇ ಆತನು ಅಸ್ಪಲಿತವಾಗಿ ವೇದಗಳನ್ನು ಪಠಿಸತೊಡಗಿದನು. ಈ ಚಮತ್ಕಾರವನ್ನೆಲ್ಲ ನೋಡಿ ಆ ಬ್ರಾಹ್ಮಣದ್ವಯರು, ಭಯ ಚಕಿತರಾಗಿ ಕುಳಿತು ಬಿಟ್ಟರು. ಅವರ ಗ೦ಟಲೊಣಗಿ ಮಾತು ಬಾರದಂತಾದವು ಇಬ್ಬರ ಬಾಯಿಯಿಂದಲೂ ರಕ್ತ ಸೋರತೊಡಗಿತು.ವಾದ ಮಾಡಲು ಅಸಮರ್ಥರಾದ ಅವರು ಗುರುಗಳಿಗೆ ಶರಣುಹೋದರು. ತಮ್ಮ ಅಪರಾಧವನ್ನು ಕ್ಷಮಿಸಬೇಕೆಂದು ಪರಿಪರಿಯಾಗಿ ಕೇಳಿಕೊಳ್ಳತೊಡಗಿದರು. ಆದರೆ ಗುರುಗಳು ಮದಂಧರಾದ ನೀವು ಬಹಳಷ್ಟು ಪಾಪ ಮಾಡಿರುವಿರಿ ! ತ್ರಿವಿಕ್ರಮರಂಥ ಶ್ರೇಷ್ಠ ಯತಿಗಳ ಮನ ನೋಯಿಸಿರುವಿರಿ ! ಅನೇಕ ಬ್ರಾಹ್ಮಣೋತ್ತಮರಿಗೆ ಅವಮಾನ ಮಾಡಿರುವಿರಿ ! ಅದರಿಂದಾಗಿ ನಿಮಗೆ ಹನ್ನೆರಡು ವರ್ಷಗಳ ವರೆಗೆ ಬ್ರಹ್ಮ ರಾಕ್ಷಸ ಜನ್ಮ ಬರುವುದು ! ಇದು ಖಂಡಿತವಾದ ಮಾತು !? ಎಂದು ನಿಷ್ಟುರರಾಗಿ ಹೇಳಿದರು. ಆಗ ಆ ಪಂಡಿತರಿಬ್ಬರೂ ಪಶ್ಚಾತ್ತಾಪ ಪಡುತ್ತ ದೈನ್ಯದಿಂದ 'ಗುರುದೇವಾ ದಯವಿಟ್ಟು ನಮ್ಮ ಶಾಪ ವಿಮೋಚ ನೆಗೆ ಮಾರ್ಗ ವನ್ನಾದರೂ ಹೇಳಿರಿ !'' ಎಂದು ಸಾಷ್ಟಾಂಗ ನಮಸ್ಕಾರ ಹಾಕಿದರು. ಆಗ ಗುರುಗಳು ನೀವು ಮಾಡಿದ ಪಾಪವನ್ನಂತೂ ಹನ್ನೆರಡು ವರ್ಷ ರಾಕ್ಷಸರಾಗಿ ಅನುಭವಿಸಲೇಬೇಕು ! ನಂತರ ಒಬ್ಬ ವೇದವಿದ್ಯಾ ಸಂಪನ್ನನಾದ ಬ್ರಾಹ್ಮಣನು ನಾರಾಯಣ ವಾಕ್ಯವನ್ನು ಹೇಳುವನು ಅದರ ಮುಂದಿನ ವಾಕ್ಯವನ್ನು ನೀವು ಸ್ಮರಣೆಗೆ ತಂದುಕೊಂಡಾಗ್ಗೆ ನಿಮಗೆ ಸದ್ಗತಿ ದೊರೆಯುವದು. ನೀವೀಗ ನದೀ ತೀರದ ಕಡೆಗೆ ಹೋಗಿರಿ !'' ಎಂದು ಆಜ್ಞಾಪಿಸಿದರು. ಪಂಡಿತರು ಹೃದಯ ವಿಕಾರದಿಂದ ನರಳುತ್ತ ಕೈ ಕೈ ಹಿಡಿದುಕೊಂಡು, ತತ್ತರಿಸುತ್ತ ನದೀ ತೀರಕ್ಕೆ ಹೋಗುವಷ್ಟರಲ್ಲಿಯೇ ನೆಲಕ್ಕೆ ಬಿದ್ದು ರಕ್ತ ಕಾರಿಸತ್ತು ಹೋದರು. ಅವರಿಗೆ ರಾಕ್ಷಸ ಜನ್ಮವು ಪ್ರಾಪ್ತವಾ lಯಿತು. ಹನ್ನೆರಡು ವರ್ಷಗಳ ನಂತರ ಗುರುವಾಕ್ಯದಂತೆ ಅವರು ರಾಕ್ಷಸ ಜನ್ಮದಿಂದ ವಿಮುಕ್ತಿ ಪಡೆದರೆಂದು ಸಿದ್ಧಮುನಿಯು ಹೇಳಿದನೆಂಬಲ್ಲಿಗೆ ಸಾರ ರೂಪ ಶ್ರೀ ಗುರು ಚರಿತ್ರೆಯ 27ನೇ ಅಧ್ಯಾಯ ಮುಕ್ತಾಯವಾಯಿತು.


Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane