Mana Mandiradolu nelasu / Raghvendra swamy devotional song
ಮನ ಮಂದಿರದೊಳು ನೆಲೆಸೈ ಬಂದು
ರಾಘವೇಂದ್ರಗುರು ದಯ ಮಾಡಿಂದು ||
ರಾಘವೇಂದ್ರಗುರು ದಯ ಮಾಡಿಂದು ||
ನಗ ನೋವಿನ ಗರವಿ ಮನವು
ಭವ ಬಂಧನದಿ ಕಾಣದು ತಿಳಿವು|
ಗುರುಪಾದ ಸೇವೆಯಿಮೂಡಲಿ ಅರಿವು
ನಿಮ್ಮಯ ಕೃಪೆಯೇ ನಮಗಿಹ ಪರವು ||
ಬೃಂದಾವನವೇ ತವಸ್ಥಿರವಾಸವು
ವೇಣೂಹರಿಯ ಧ್ಯಾನವೇ ನಿರತವು|
ದೀನರು ಪಾಲಿಪ ಧೀಮಂತ ಭಾವವು
ನಿಮ್ಮಯ ಕೃಪೆಯೇ ನಮಗಿಹ ಪರವು||
ವರಮಂತ್ರಾಲಯ ಪಾವನ ನಿಲಯ
ಕರುಣ ಹೃದಯದಿ ನೀಡುವ ಅಭಯ
ಮನದೊಳು ಮುಸಿಕಿದ ಈ ಕತ್ತಲೆಯ
ನೀಗಿಸಿ ಬೆಳಕನು ನೀ ನೀಡು ಜಿಯ ||
Comments
Post a Comment