Hari Narayana song lyrics in Kannada
Hari Narayana Lyrics | Meaning & Transliteration in English A beautiful devotional hymn dedicated to Lord Vishnu In this post, we explore the devotional composition "ಹರಿ ನಾರಾಯಣ" (Hari Narayana), a spiritual hymn that praises the divine name of Lord Vishnu. It emphasizes the power of chanting the Lord’s name to overcome suffering and attain salvation. Below you'll find the Kannada lyrics and English transliteration Lyrics in Kannada ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಎನು ಮನವೆ ಹರಿ ನಾರಾಯಣ ದುರಿತ ನಿವಾರಣ ಹರಿ ನಾರಾಯಣ ಎನು ಮನವೆ ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ತರಳ ಧೃವನಿಂದ ಅಂಕುರಿಸಿತು ಅದು ವರ ಪ್ರಹ್ಲಾದನಿಂದ ಮೊಳಕೆ ಆಯ್ತು ಧರಣೀಶ ರುಕುಮಾಂಗದನಿಂದ ಚಿಗುರಿತು ಕುರುಪಿತಾಮಹನಿಂದ ಹೂವಾಯ್ತು ||೧|| ವಿಜಯನ ಸತಿಯದಿಂದ ಕಾಯಾಯ್ತು ಅದು ಗಜೇಂದ್ರನಿಂದ ದೊರೋಹಣ್ಣಾಯ್ತು ನಿಜ ಶುಕಾಮುನಿಯಿಂದ ಪರಿಪಕ್ವವಾಯಿತು ಅಜಮಿಳ ತಾನುಂಡು ರಸಸವಿದ ||೨|| ಕಾಮಿತ ಫಲವೀವ ನಾಮವೊಂದಿರಲಾಗಿ ಹೋಮ ನೇಮ ಜಪ ತಪವ್ಯಕೆ ಸ್ವಾಮಿ ಶ್ರೀ ಪುರಂದರ ವಿಠಲನ ನಾಮವ ಪ್ರೇಮದಿಂದಲಿ ನೆನೆಮನವೆ ||೩|| English...