Pujisuve Sitarama na lyrics in Kannada
ಪೂಜಿಸುವೆ ಸೀತಾರಾಮರನ ಆನಂದದಿಂದಲ್ಲಿ ಭರತ ಲಕ್ಷ್ಮಣರನ್ನು
ನಮ್ಮದಿದೂ ಸ್ವಾಮಿ ನಮಗೆ ಬಲು ಪ್ರೇಮಿ
ಸ್ಮರಿಸಿರಿ ಸ್ವಾಮಿ ಸರ್ವಾಂತರ್ಯಾಮಿ
ಸ್ಮರಿಸಿರಿ ಸ್ವಾಮಿ ಸರ್ವಾಂತರ್ಯಾಮಿ
ಭಕ್ತರ ಕಾಪಾಡು ಕೃಷ್ಣಸ್ವಾಮಿ
ನಿನ್ನ ಭಜನೆಯ ಮಾಡುವೆ ರಾಮಸ್ವಾಮಿ
ವಾಲಿಯನ್ನೆ ಕೊಂದು ಸುಗ್ರೀವನನ್ನೆ ತಂದು
ಸುಖವಾಗಿ ಸ್ನೇಹವನ್ನೆ ಬೆಳಸಿ ಬಂದು
ಭಕ್ತ ಹನುಮಂತನ ಭಜನೆಯಿಂದ
ಭವ ಬಂಧನವ ಬಿಡಿಸಿದನು ರಾಮಚಂದ್ರ
ಸೇತುವೆಯ ಕಟ್ಟಿ ಶರಧಿಯನ್ನೆ ದಾಟಿ
ವಿಭೀಷಣ ದೇವರಿಗೆ ಪಟ್ಟ ಕಟ್ಟಿ
ದುಷ್ಟ ರಾವಣನು ಕೊಂದ ಜಟ್ಟಿ ನೀನು
ಶಶಿ ಮುಖಿ ಸೀತೆಯನ್ನೆ ತಂದು ಬಿಟ್ಟೆ
Comments
Post a Comment