Shri Guru Charitre - Chapter 49
ಅಧ್ಯಾಯ ೪೯
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ! ಮುಂದೆ ಕೆಲವು ದಿನಗಳು ಕಳೆಯುವಷ್ಟರಲ್ಲಿಯೇ ಗುರುಗಳ ಪೂರ್ವಾಶ್ರಮದ ತಂಗಿಯಾದ ರತ್ನಾಯಿಯು ಕುಷ್ಠರೋಗ ಪೀಡಿತಳಾಗಿ ಗುರುದರ್ಶನಕ್ಕೆ ಬಂದಳು. ತನ್ನ ಮೇಲೆ ಕರುಣೆದೋರಬೇಕೆಂದು ಪರಿಪರಿಯಿಂದ ಪ್ರಾರ್ಥಿಸುತ್ತ ಅವರ ಅಡಿದಾವರೆಗಳೆದುರು ಹೊರಳಾಡತೊಡಗಿದಳು. ಗುರುಗಳು ರತ್ನಾಯಿಯನ್ನು ಕುರಿತು, “ತಂಗೀ ! ನೀನು ಬಹಳ ಪಾಪವನ್ನು ಮಾಡಿರುವಿ ! ಅದರ ಫಲವನ್ನು ನೀನು ಮುಂದಿನ ಜನ್ಮದಲ್ಲಿ ಸಹಿತ, ಕುಷ್ಠರೋಗಿಯಾಗಿಯೇ ಅನುಭವಿಸಬೇಕಾಗುವದು !” ನಾನು ಇಷ್ಟು ದಿನಗಳವರೆಗೆ ಬಳಲಿ, ನಿನ್ನ ಚರಣ ಕಮಲಗಳನ್ನು ಕಂಡಿರುವೆ; ನಿನ್ನ ಚರಣದರ್ಶನವಾದ ಮೇಲೆಯೂ ನನ್ನ ಪಾಪ ಉಳಿಯುವದೇ ?'' ಎಂದು ಪ್ರಶ್ನೆ ಮಾಡಿದಳು.
ಗುರುಗಳು ನಮ್ಮ ದರ್ಶನವಾದ ಮೇಲೆ ನಿನ್ನ ಪಾಪಗಳುಳಿಯಲಾರವೆಂಬ ನಿಶ್ಚಿತ ಭಾವನೆ ನಿನಗಿದ್ದರೆ, ಇದೇ ಜನ್ಮದಲ್ಲಿಯೇ ನೀನು ಮುಕ್ತಳಾಗುವಿ ! ನೀನು “ಪಾಪ ವಿನಾಶಿನಿ'' ತೀರ್ಥದಲ್ಲಿ ಸ್ನಾನಮಾಡು ! ನಿನ್ನ ರೋಗ ನಿವಾರಣೆಯಾಗುವದು !'' ಎಂದು ಹೇಳಿದರು. ರತ್ನಾಯಿಯು ಗುರ್ವಾಜ್ಞೆಯಂತೆ ತೀರ್ಥಸ್ನಾನ ಮಾಡಿ ರೋಗದಿಂದ ವಿಮುಕ್ತಿ ಪಡೆದಳು. ಮುಂದೆ ಅವಳು ಮಠದಲ್ಲಿಯೇ ಕೈಲಾದ ಸೇವೆ ಮಾಡುತ್ತ ಉಳಿದು ಕೊಂಡಳು. ಗುರುಗಳು ಶಿಷ್ಯರಿಗೆ ಗಾಣಗಾಪುರದ ಸ್ಥಾನ ಮಹಾತ್ಮೆಯನ್ನು ವಿವರಿಸಿ ಹೇಳಿದರು. 'ಭೀಮಾ- ಅಮರಜಾ ಸ೦ಗಮವು, ಗಂಗಾ-ಯಮುನೆಗಳ ಸಂಗಮವೆಂದೂ, ಈ ಸ್ಥಳವೇ ಶ್ರೀ ಕಾಶಿಯೆಂದೂ' ವಿವರಣೆ ನೀಡಿದರು. ನಂತರ ಅಲ್ಲಿ ಕೋಟಿತೀರ್ಥ ತೋರಿಸಿದರು. ಗುರುಗಳು ಗಾಣಗಾಪುರದಲ್ಲಿ ಉಳಿದು ಅದನ್ನು ಕೈಲಾಸವನ್ನಾಗಿ ಮಾರ್ಪಡಿಸಿದರೆಂದು, ಸಿದ್ಧಮುನಿಯು ನಾಮಧಾರಕನಿಗೆ ಹೇಳಿದನೆಂಬಲ್ಲಿಗೆ, ಸಾರರೂಪ ಶ್ರೀ ಗುರುಚರಿತ್ರೆಯ 49ನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment