Aksharamala Ganapathi


ಅನುಪಮ ಮಹಿಮಾ ಸಾರ ಗಣೇಶ 
ಆದಿಪುಜ್ಯನುತ ದೇವ ಗಣೇಶ 
ಇಷ್ಟ ಫಲಪ್ರದ ಸುಮುಖ ಗಣೇಶ 
ಈಶ ತನಯ ಮಹನೀಯ ಗಣೇಶ 
ಉರುಗ ವಿಭೂಷಣ ವಿಭವ ಗಣೇಶ 
ಊಜೀತ ತನು ತನುಪಾತ ಗಣೇಶ 
ಋಷಗಣ ವಂದಿತಾ ವರದ ಗಣೇಶ 
ೠಕಾರ ಪ್ರಿಯ ಪೊರೆದ ಗಣೇಶ 
ಎಡರುಗಳನ್ನು ಕಡಿದಿಡುವ ಗಣೇಶ 
ಏಕದಂತ ನಿತ್ಯಾತ್ಮಕ ಗಣೇಶ 
ಐಕ್ಯಮತ್ಯ ನಿಕ್ಷೇಪ ಗಣೇಶ
ಒಲಿಯುತ ಭಕ್ತರ ಪೊರೆವ ಗಣೇಶ
ಓಂಕಾರಾ+ ದೇವ ಗಣೇಶ 
ಔಪಾಸಕರ ಅಭಿಮಾನಿ ಗಣೇಶ 
ಅಂಬಾ ಪ್ರಿಯ ತನುಜಾತ ಗಣೇಶ 
(ಅಃ)ಅಹವಶತೃ ವಿನಾಶ ಗಣೇಶ

ಕರುಣಾಕರ ಕಮನೀಯ ಗಣೇಶ 
ಖೇಚರಗಾನ ನಂದ ಗಣೇಶ 
ಗಜಮುಖನಾಮದಿ ಮೆರೆವ ಗಣೇಶ 
ಘಾತುಕ ದುರ್ಜನಭಂಗ ಗಣೇಶ 
ಗಂಗೋದ್ಭವ ಲಿಂಗೈಕ್ಯ ಗಣೇಶ 

ಚಂದ್ರ ಗರ್ವ ವಿಧ್ವಂಸ ಗಣೇಶ 
ಛತ್ರಾಲಂಕೃತ ಚಲುವ ಗಣೇಶ 
ಜನನ ಮರಣ ಭಯರಯಿತ ಗಣೇಶ 
ಝoಕಣಿ ಗಿಂತಿಣಿಯಂತ ಗಣೇಶ 
ಜ್ಞಾನಗಮ್ಯ ಸರ್ವಜ್ಞ ಗಣೇಶ 

ಟoಕಪಾಶಧರ ವಿಕಟ ಗಣೇಶ 
ಠಕಾರೋಪಣ ಜಠರ ಗಣೇಶ 
ಡಮರುಗ ಹಸ್ತ ಸುಪುತ್ರ ಗಣೇಶ 
ಢಕ್ಕಾನಾದಲೋಲ ಗಣೇಶ 
ಣತಪಾರಿಪಾಲಿನಿ ನಿಪುಣ ಗಣೇಶ 

ತತ್ವಜ್ಞಾನ ನಂದ ಗಣೇಶ 
ಥಳ ಥಳ ಪಾಮಿಣಿ ಮುಕುಟ ಗಣೇಶ 
ದ್ವೈಮಾತುರ  ವಿಘ್ನೇಶ ಗಣೇಶ 
ಧುoಡು ವಿನಾಯಕ ವಿನುತ ಗಣೇಶ 
ನಾಗಸೂತ್ರಧಾರ ಶಾಂತ ಗಣೇಶ 

ಪರಮ ಪುರುಷನ ಅವತಾರ ಗಣೇಶ 
ಫಾಲ ಚಂದಿರ ಲೀಲ  ಗಣೇಶ 
ಬ್ರಹ್ಮಚರ್ಯ ವ್ರತ ನಿಷ್ಠ ಗಣೇಶ 
ಭಾರತ ಲೇಖನ ಚತುರ ಗಣೇಶ 
ಮೂಷಿಕ ವಾಹನ ಧೀರ ಗಣೇಶ 

ಯದುಕುಲ ನಂದನ ನಮಿತ ಗಣೇಶ 
ರಾಮಚಂದ್ರ ಸಂಪೂಜ್ಯಾ ಗಣೇಶ 
ಲಂಬೋದರ ಹೇರಂಬ ಗಣೇಶ 
ವಕ್ರತುಂಡ ರಿಪುಖಂಡ ಗಣೇಶ 
ಶೂರ್ಪಕರ್ಣ ಸುಕುಮಾರ ಗಣೇಶ 
ಷಣ್ಮುಖ ಸೋದರ ಸಿದ್ದಿ ಗಣೇಶ 
ಸಕಲಾಕರ ಪರಿಪೂರ್ಣ ಗಣೇಶ 
ಹರಿಹರ ವಿನುಸುತ ವರದ ಗಣೇಶ 
ಲಕ್ಷ್ಮಣ ಗುಣ ಸುಂಪೂಜ್ಯ ಗಣೇಶ 
ಕ್ಷೇತ್ರಪಾಲ ಸಂಪ್ರೀತ ಗಣೇಶ 


Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane