Shri Guru Charitre - Chapter 43
ಅಧ್ಯಾಯ ೪೩
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕಾ ! ಗುರ್ವಾಜ್ಞೆಯಂತೆ ನಿಮ್ಮ ಪೂರ್ವಜನಾದ ಸಾಯಂದೇವನು, ಕುಟುಂಬ ಸಮೇತನಾಗಿ ಬಂದು, ಗಾಣಗಾಪುರದಲ್ಲಿಯೇ ಇರತೊಡಗಿದನು. ಗುರುಗಳು ಅವರೆಲ್ಲರನ್ನೂ ತಮ್ಮ ವರದ ಹಸ್ತದಿಂದ ಆಶೀರ್ವದಿಸಿದರು. ಸಾಯಂದೇವನ ಮಗನಾದ ನಾಗನಾಥನನ್ನು ಕೃಪಾದೃಷ್ಟಿಯಿಂದ ನೋಡಿದರು. ಅಂದು ಅನಂತ ಚತುರ್ದಶಿ ಇದ್ದ ಪ್ರಯುಕ್ತ ಸಾಯಂದೇವನು ಗುರುಗಳನ್ನೇ ಅನಂತನೆಂಬ ಭಾವನೆಯಿಂದ ತನ್ನ ಮಡದಿಯಿಂದೊಡಗೂಡಿಕೊಂಡು ಬಹು ಭಕ್ತಿಯಿಂದ ಪೂಜಿಸಿ, ಅನಂತರ ವ್ರತ ಕಥೆಗಳನ್ನು ಶ್ರವಣ ಮಾಡಿದರು. ನಾಮಧಾರಕಾ ! ಗುರುಗಳು ತ್ರಿಮೂರ್ತಿಗಳ ಪೂರ್ಣಾವತಾರರಾದ ಪ್ರಯುಕ್ತ ಯಾವ ವ್ರತ, ಪೂಜೆಗಳನ್ನು ಮಾಡಿದರೂ, ಅವು ನೇರವಾಗಿ ಗುರುಗಳಿಗೆ ಸಲ್ಲುತ್ತಿದ್ದವೆಂದು ಸಿದ್ಧಮುನಿಯು ನಾಮಧಾರಕನಿಗೆ ತಿಳಿಸಿದನೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ 43ನೇ ಅಧ್ಯಾಯ ಮುಕ್ತಾಯವಾಯಿತು.
Comments
Post a Comment