Shri Guru Charitre - Chapter 52
ಅಧ್ಯಾಯ ೫೨
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ! ಶ್ರೀ ಗುರುಗಳು ಶ್ರೀಶೈಲಕ್ಕೆ ಹೊರಡುವಾಗ ಅಲ್ಲಿಯ ಭಕ್ತ ಜನರು, ಬಹಳೇ ಕಳವಳಕ್ಕೀಡಾಗಿದ್ದರು. ತಮ್ಮನ್ನು ಪರದೇಶಿಗಳನ್ನಾಗಿ ಮಾಡಿ ಹೋಗಬಾರದೆಂದು ಅವರು ಗುರುಗಳಿಗೆ ಪರಿಪರಿಯಿಂದ ಪ್ರಾರ್ಥಿಸಿದ್ದರು. ಗುರುಗಳು ಅವರೆಲ್ಲರಿಗೂ ಲೋಕದ ಕಣ್ಣಿಗೆ ನಾವು ಶ್ರೀಶೈಲ ಯಾತ್ರೆಗೆ ಹೋಗುತ್ತಿರುವಂತೆ ಕ೦ಡರೂ, ಈ ಗಾಣಗಾಪುರದಲ್ಲಿ ನಾವು ಶಾಶ್ವತವಾಗಿ ನೆಲೆಗೊಂಡಿರುತ್ತೇವೆಂದು ನುಡಿದು ಅವರನ್ನೆಲ್ಲ ಸಮಾಧಾನಗೊಳಿಸಿದ್ದ ವಿಷಯವನ್ನಂತೂ ನಿನಗೆ ಈ ಮೊದಲೇ ತಿಳಿಸಲಾಗಿದೆ. ಗುರುಗಳಿದ್ದಾಗ ಗಾಣಗಾಪುರವು ವೈಕುಂಠದಂತೆ ಶೋಭಿಸುತ್ತಿತ್ತು. ಈಗ ಅದು ತಾಯಿ ಇಲ್ಲದ ಮಗುವಾಗಿ, ದೇವರಿಲ್ಲದ ಗುಡಿಯಾಗಿ, ಗಂಡನಿಲ್ಲದ ನಾರಿಯಂತೆ ಕಳಾಹೀನವನಿಸುತ್ತಿತ್ತು, ಶ್ರೀಶೈಲ ತಲುಪಿದ ದಿವಸ ಗುರುಗಳು, ಪಾತಾಳ ಗಂಗೆಯಲ್ಲಿ ಸಾಗಿದರು. ನಂತರ ಅವರೂ ಅದೃಶ್ಯರಾದ ವಿಷಯವನ್ನೂ ನಿನಗೆ ಈ ಮೊದಲೇ ತಿಳಿಸಲಾಗಿದೆ. ಎಂದು ಸಿದ್ಧಮುನಿಯು ನಾಮಧಾರಕನಿಗೆ ಮುಖ್ಯ ವಿಷಯಗಳನ್ನು ಮತ್ತೊಮ್ಮೆ ನೆನಪಿಸಿದರೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ 52ನೆಯ ಅಧ್ಯಾಯ ಮುಗಿಯಿತು.
Comments
Post a Comment