ಒಗಟು ಬಿಡಿಸಿ (ಭಾಗ ೧)
ಒಗಟು ಬಿಡಿಸಿ
ಇಲ್ಲಿ ಕೆಲವು ಒಗಟು ಇದೆ. ಅದನು ಬಿಡಿಸಲೂ ಪ್ರಯತ್ನಿಸಿ. ನಿಮ್ಮ ಉತ್ತರವನ್ನು ಕಾಮೆಂಟನಲ್ಲಿ ಬರೆಯಿರಿ.
೧. ಬಾಲ್ಯದಲ್ಲಿ ಹಸಿರುಸೀರೆ, ಯೌವನದಲ್ಲಿ ಕೆಂಪುಸೀರೆ, ಮುಪ್ಪಿನಲ್ಲಿ ಕರಿಸೀರೆ. ನಾನ್ಯಾರು???
೨. ಮರದಲ್ಲಿ ಹಬ್ಬುತ್ತದೆ, ಪೇಟೆಯಲ್ಲಿ ಮೆರೆಯುತ್ತದೆ, ಶುಭಕಾರ್ಯದಲ್ಲಿ ಮುಂದಿರುತ್ತದೆ. ಯಾರದು???
೩. ಮೂರು ಕಾಲಿನ ರಾಣಿ, ಎಲ್ಲರ ಮನೆಯಲ್ಲಿ ಇರುತಿದೆ ಜಾಣೆ, ಹೊರೆ ಕಟ್ಟಿಗೆ ತಿಂತೀಯಾ, ಗಡಿಗೆ ನೀರು ಕುಡಿಯುತ್ತಿಯಲ್ಲೆ ಮಹಾರಾಣಿ. ಯಾರು??
೪. ಕತ್ತಲು ಮನೆಯಲ್ಲಿ ಕಂಬ ಬಿದ್ದರೆ ನಮ್ಮಪ್ಪನು ಹುಡುಕಲಾರ ನಿಮ್ಮಪನು ಹುಡುಕಲಾರ. ಯಾರದು?
೫. ಮಗುವಾಗಿ ಹುಟ್ಟಿ ಚಪ್ಪರದೊಳಗೆ ನಿಂತೆ, ಹುಡುಗಿಯಾಗಿ ಬೆಳೆದು ಕೆಂಪೂಸೀರೆ ಉಟ್ಟೆ, ನಾನಿಲ್ಲದ ಮನೆಯಿಲ್ಲ. ಹಾಗಾದರೆ ನಾನು ಯಾರು?
೬. ಅಂಗಿ ಮೇಲೆ ಅಂಗಿ, ಹದಿನಾರು ಅಂಗಿ, ಬಿಚ್ಚಿ ನೋಡು ತಂಗಿ, ಏನು ಹೇಳು ನಿಂಗಿ?
೭. ಮುಳ್ಳುಮ್ಮನ ಹೊಟ್ಟೆಯಲ್ಲಿ ನೂರಾರು ಮಕ್ಕಳು. ಯಾರದು??
೮. ಬಿಳಿ ಹುಡುಗಿ ಮೇಲೆ ಗುದ್ದಿದಾಗ ಮನೆಯಲ್ಲಿ ಮಕ್ಕಳು. ಯಾರದು?
೯. ನದಿಗಳಿವೆ ನೀರಿಲ್ಲ, ಬೆಟ್ಟಗಳಿವೆ ಕಲ್ಲುಗಳಿಲ್ಲ. ಏನದು?
೧೦. ಮೇಲೆ ಹಸಿರು, ಒಳಗೆ ಕೆಂಪು, ತಿಂದರೆ ತಂಪು. ಏನದು?
10. ಕಲ್ಲಂಗಡಿ ಹಣ್ಣು
ReplyDeleteಮಾವಿನ ಎಲೆ
ReplyDeleteಮಾವಿನ ಎಲೆ
ReplyDeleteಯಾವುದು?
Deleteಮಾವಿನ ಎಲೆ
ReplyDelete೨. ತೆಂಗಿನ ಕಾಯಿ
ReplyDeleteಕ್ಷಮಿಸಿ... ತಪ್ಪು ಉತ್ತರ
Delete೧. ಅಡಕೆ
ReplyDelete೩. ಅಡುಗೆ ಒಲೆ
೭. ಹಲಸು
೧. ಕ್ಷಮಿಸಿ ತಪ್ಪು ಉತ್ತರ
Delete೩ ಹಾಗೂ ೭ ಸರಿ
ಇಲ್ಲಿಯವರೆಗೆ ಬಂದ ಸರಿಯಾದ ಉತ್ತರ
ReplyDelete೧.
೨.
೩. ಒಲೆ
೪.
೫.
೬. ಈರುಳ್ಳಿ
೭. ಹಲಸಿನಹಣ್ಣು
೮. ಬೆಳ್ಳುಳ್ಳಿ
೯. ಭೂಪಟ
೧೦. ಕಲ್ಲಂಗಡಿ ಹಣ್ಣು
೧. ತೆಂಗಿನಕಾಯಿ
ReplyDelete