Shri Guru Charitre - Chapter 5
ಅಧ್ಯಾಯ ೫
||ಹರಿ: ಓಂ ಶ್ರೀ ಗುರುಭ್ಯೋನಮ: ||
ದುರ್ವಾಸರ ಶಾಪದಂತೆ ನಾರಾಯಣನು ಮತ್ಸ್ಯ, ಕೂರ್ಮ, ವರಾಹ, ಮುಂತಾದ ಅವತಾರಗಳನ್ನು ತಾಳಿ ದುಷ್ಟ ನಿಗ್ರಹ, ಶಿಷ್ಟ ಪರಿಪಾಲನೆಗಳನ್ನು ಮಾಡಿದಂತೆ, ದತ್ತಾತ್ರಯನೂ ಸಹಿತ ಕಲಿಯುಗವು ಪ್ರಾರಂಭವಾದ ಮೇಲೆ ಅವತಾರವನ್ನೆತ್ತಬೇಕಾಯಿತು. ಯಾಕೆಂದರೆ ಕಲಿಯ ಪ್ರಭಾವದಿಂದಾಗಿ ಆಗ ಬ್ರಾಹ್ಮಣರೇ ಮೊದಲಾದ ಚತುರ್ವಣ್ರದವರು ಧರ್ಮ ಭ್ರಷ್ಟರಾಗಿ, ಅವಿವೇಕಿಗಳಂತೆ ವರ್ತಿಸತೊಡಗಿದ್ದರು. ಜನರಲ್ಲಿ ಕ್ರೂರತೆ, ದುಃಖ, ಅಸೂಯೆ, ಮುಂತಾದ ದುರ್ಗುಣಗಳು ತಾಂಡವಾಡತೊಡಗಿದ್ದವು. ಇಂಥ ಸಂದರ್ಭದಲ್ಲಿ ತನ್ನ ಅವತಾರದ ಅವಶ್ಯಕತೆಯಿದೆ ಎಂಬುದನ್ನರಿತುಕೊಂಡ ಗುರುದೇವನು, ತಕ್ಷಣವೇ ಅವತಾರ ಮಾಡಿದನು.
ಪೂರ್ವ ದೇಶದ 'ಪೀಠಾಪುರ 'ವೆಂಬ ನಗರಕ್ಕೆ 'ಅಪಳ' ನೆಂಬ ಹೆಸ ರಿನ ಆಪಸ್ತಂಭ ಶಾಖೆಯ ಬ್ರಾಹ್ಮಣನು ರಾಜನಾಗಿದ್ದನು. ಆತನಿಗೆ ಸುಮತಿಯೆಂಬ ಹೆಸರಿನ ಪತಿವ್ರತೆಯಾದ ಹೆಂಡತಿಯಿದ್ದಳು. ಪೂರ್ವಜನ್ಮದ ಕರ್ಮಫಲದಿಂದಾಗಿ, ಸುಮತಿಯು ಹೆತ್ತ ಮೂರು ನಾಲ್ಕು ಮಕ್ಕಳು ಸತ್ತು ಹೋದವು, ನಂತರ ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬನು ಕುರುಡನೂ, ಇನ್ನೊಬ್ಬನು ಹೆಳವನೂ ಆಗಿ ಬದುಕಿ ಉಳಿದಿದ್ದರು. ಹೀಗಾಗಿ ಆ ದಂಪತಿ ಗಳಿಗೆ ಅಷ್ಟೆಶ್ವರಗಳಿದ್ದರೂ, ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿತ್ತು ಹೀಗಿರುತ್ತಿರಲೊಂದು ದಿವಸ, ದತ್ತಗುರುದೇವನು ಭಿಕ್ಷುಕ ವೇಷದಲ್ಲಿ ಅವರ ಮನೆಯ ಬಾಗಿಲಿಗೆ ಬಂದನು. “'ಭವತೀ ಭಿಕ್ಷಾಂದೇಹಿ'' ಎಂದು ಭಿಕ್ಷೆಯಾಚಿಸಿದನು. ಆದರೆ ಅಂದು ಅಪಳ ರಾಜನ ಮನೆಯಲ್ಲಿ ಪಿತೃ ಶ್ರಾದ್ಧವಿತ್ತು ಶ್ರಾದ್ಧ ಕರ್ಮಕ್ಕೆ ಆಮಂತ್ರಿಸಿದ ಬ್ರಾಹ್ಮಣರು ಇನ್ನೂ ಬಂದಿರಲಿಲ್ಲ. ಹೀಗಾಗಿ ಬ್ರಾಹ್ಮಣ ಭೋಜನ ಮುಗಿಯುವವರೆಗೂ ಭಿಕ್ಷೆ ನೀಡಲು ಬರುವಂತಿರಲಿಲ್ಲ. ಭಿಕ್ಷುಕನ ಧ್ವನಿ ಕೇಳಿದ ಸಾಧಿ ಸುಮತಿಯು ಹೊರಬಾಗಿಲಿಗೆ ಬಂದು ನೋಡಿದಳು. ಬ್ರಹ್ಮ ತೇಜಸ್ಸಿನಿಂದೊಡಗೂಡಿದ ವಟು ರೂಪದಲ್ಲಿರುವ ಭಿಕ್ಷುಕನನ್ನು ಕಂಡು ಅವಳಲ್ಲಿ ಪೂಜ್ಯ ಭಾವನೆಯುಂಟಾಯಿತು. ಹಿ೦ದು ಮುಂದಿನ ವಿಚಾರ ಮಾಡದೇ ಒಳಗೆ ಹೋಗಿ ಆ ಬ್ರಾಹ್ಮಣ ಭಿಕ್ಷುಕನಿಗೆ ಭಿಕ್ಷೆ ತಂದು ನೀಡಿ ನಮಸ್ಕರಿಸಿದಳು. ಸರ್ವಾಂತರಾಮಿಯಾದ ದತ್ತನಿಗೆ ಸಂಪ್ರೀತಿಯುಂಟಾಯಿತು. ಆತನು ಆ ಸಾದ್ವಿಗೆ ಅಮ್ಮಾ ! ಈ ನಿನ್ನ ದಾನವು ಶ್ಲಾಘನೀಯವಾಗಿದೆ. ನಿನಗೇನು ವರಬೇಕೋ ಕೇಳಿಕೋ' ಎಂದು ನುಡಿಯುತ್ತ ತನ್ನ ನಿಜರೂಪ ದರ್ಶನವನ್ನಿತ್ತನು. ದತ್ತ ಸಾಕ್ಷಾತ್ಕಾರದಿಂದ ಮುದಗೊಂಡ ಆ ತಾಯಿ, ಮತ್ತೊಮ್ಮೆ ನಮಸ್ಕರಿಸಿ, ಗುರುದೇವಾ! ನನಗೆ ಹುಟ್ಟಿದ ಮಕ್ಕಳಿಬ್ಬರೂ ಅಂಗವಿಕಲರಾಗಿದ್ದಾರೆ. ಆದಕಾರಣ ನನಗೆ ನಿನ್ನಂತೆಯೇ ತೇಜಸ್ವಿಯಾದ ವಂಶೋದ್ಧಾರಕ ಪುತ್ರನನ್ನು ದಯಪಾಲಿಸು!? ಎಂದು ಪ್ರಾರ್ಥಿಸಿಕೊಂಡಳು, ಅದಕ್ಕೆ ದತ್ತಾತ್ರೇಯನು ನಸುನಗುತ್ತ
“ನನ್ನ೦ಥವನು ಎಂದರೆ ನಾನೊಬ್ಬನೇ ? ಅಂದಮೇಲೆ ನಾನೇ ನಿನ್ನ ಹೊಟ್ಟೆಯಿಂದ ಹುಟ್ಟಬೇಕಾಯಿತು ! ತಥಾಸ್ತು !'' ಎಂದು ನುಡಿದು ಅದೃಶ್ಯನಾದನು. ಸುಮತಿಯು ಆನಂದಾಶ್ಚರಗಳಿಂದ ಗಂಡನು ಮನೆಗೆ ಬಂದ ಕೂಡಲೇ ನಡೆದ ವಿಷಯವನ್ನು ತಿಳಿಸಿದಳು. ಸಾಕ್ಷಾತ್ ದತ್ತ ಗುರುವೇ ತಮ್ಮ ಉದರದಿಂದ ಜನಿಸಿ ಬರುವ ವಾರ್ತೆ ತಿಳಿದು ದಂಪತಿಗಳಿಬ್ಬರೂ ಸಂತೋಷಭರಿತರಾದರು.
ಸುಮತಿಯು ಕೆಲದಿನಗಳಲ್ಲಿಯೇ ಗರ್ಭಧರಿಸಿ, ಗಣೇಶ ಚತುರ್ಥಿಯ ಶುಭ ಮುಹೂರ್ತದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು. ಮಗುವಿಗೆ 'ಶ್ರೀಪಾದ'ನಂದು ನಾಮಕರಣ ಮಾಡಿದರು. (ಸನ್ 1320ನೇ ಇಸ್ವಿ) ಜ್ಯೋತಿಷಿಗಳು ಬಾಲಕನು ಜಗದ್ಗುರುವಾಗಿ ಮೆರೆಯುವನೆ೦ದು ಭವಿಷ್ಯ ಹೇಳಿದರು. ಶ್ರೀಪಾದ ಶುಕ್ಲ ಪಕ್ಷದ ಚಂದ್ರನಂತೆ ಬೆಳೆಯುತ್ತಿರಲು, ತಂದೆ-ತಾಯಿಗಳು ಆತನಿಗೆ ಏಳನೇ ವರ್ಷದಲ್ಲಿ ಉಪನಯನ ಕಾರ್ಯ ಮಾಡಿದರು. ಶ್ರೀಪಾದನು ಕೆಲವೇ ದಿನಗಳಲ್ಲಿ ವೇದವಿದ್ಯಾಪಾರಂಗತನಾದನು. ಆತನು ಹದಿನಾರನೇ ವರ್ಷಕ್ಕೆ ಕಾಲಿಟ್ಟಾಗ ತಂದೆ ತಾಯಿಗಳು ಮಗನ ಮದುವೆಯ ಬಗ್ಗೆ ಆಲೋಚನೆ ಮಾಡತೊಡಗಿದರು. ಶ್ರೀಪಾದನು ತಂದೆ-ತಾಯಿಗಳಿಗೆ ''ನನಗೆ ವೈರಾಗ್ಯ ಸ್ತ್ರೀಯೊಂದಿಗೆ ಮದುವೆ ಮುಗಿದು, ನಾನೀಗ ವಲ್ಲಭನಾಗಿದ್ದೇನೆ. ಆದ ಕಾರಣ, ನಾನು ಬ್ರಹ್ಮಚಾರಿಯಾಗಿಯೇ ಉಳಿಯುತ್ತೇನೆ. ಹಾಗೂ ಭಕ್ತೋದ್ಧಾರದ ನಿಮಿತ್ತವಾಗಿ ಉತ್ತರ ದಿಕ್ಕಿನತ್ತ ಪ್ರಯಾಣ ಮಾಡುತ್ತ ತೀರ್ಥಾಟನೆಗೆ ಹೊರಡುತೇನೆ, ದಯವಿಟ್ಟು ನನಗೆ ಅಪ್ಪಣೆ ಕೊಡಿರಿ' ಎಂದುಕೊಂಡನು, ಮಗನ ಮಾತು ಕೇಳಿ ತ೦ದೆ-ತಾಯಿಗಳು ಅಪ್ಪಾ! ನೀನೇ ನಮ್ಮನ್ನು ತೊರೆದು ಹೊರಟರೆ ಮುಪ್ಪಿನ ಕಾಲದಲ್ಲಿ ನಮ್ಮನ್ನು ರಕ್ಷಿಸುವರಾರು? ನಿನ್ನ ಅಣ್ಣಂದಿರಾದರೋ ಅಂಗವಿಕಲರಾಗಿದ್ದಾರೆ,'' ಎಂದು ಪ್ರಲಾಪಿಸತೊಡಗಿದರು. ಆಗ ಶ್ರೀಪಾದನು ತಂದೆ ತಾಯಿಗಳನ್ನು ಸಂತೈಸುತ್ತ ಅಂಗವಿಕಲರಾದ ಅಣ್ಣಂದಿರತ್ತ ಅಮೃತದೃಷ್ಟಿ ಬೀರಿದನು. ಕೂಡಲೇ ಅವರು ಸು೦ದರ ಕಾಯದಸದೃಢ ವ್ಯಕ್ತಿಗಳಾಗಿ ಮಾರ್ಪಟ್ಟರು. ಶ್ರೀಪಾದನು ತಾಯಿಯನ್ನು ಕುರಿತು, ''ಅಮ್ಮಾ! ಈಗ ನನ್ನ ಅಣ್ಣಂದಿರು ಸಧೃಡಕಾಯದವರೂ, ಜ್ಞಾನವಂತರೂ ಆಗಿದ್ದಾರೆ, ಇವರಿಂದ ನಿಮ್ಮ ವ೦ಶವು ಉದ್ಧಾರವಾಗುತ್ತದೆ. ಇನ್ನು ನನ್ನ ಯಾತ್ರೆಗೆ ಅಡ್ಡಿ ಪಡಿಸಬೇಡಿರಿ ! ಯಾಕೆಂದರೆ ನಾನು ಸಾಧುಗಳಾದ ಕೆಲವು ಭಕ್ತರಿಗೆ ದೀಕ್ಷೆ ಕೊಡುವದಕ್ಕಾಗಿ ಕಾಶೀಕ್ಷೇತ್ರದತ್ತ ಸಾಗಬೇಕಾಗಿದೆ ! ಎಂದು ವಿನಂತಿಸಿಕೊಂಡನು. ತಾಯಿ ತಂದೆಗಳು ನಿರುಪಾಯವಾಗಿ ಅತನಿಗೆ ಅನುಮತಿ ನೀಡಿ ಬೀಳ್ಕೊಟ್ಟರು. ನಂತರ ಶ್ರೀಪಾದ ಶ್ರೀವಲ್ಲಭ ಸ್ವಾಮಿಯು ಮನೋವೇಗದಿಂದ ಶ್ರೀಕಾಶೀ, ಬದರೀ ಯಾತ್ರೆಗಳನ್ನು ಮುಗಿಸಿಕೊಂಡು, ನಂತರ ಗೋಕರ್ಣ ಕ್ಷೇತ್ರಕ್ಕೆ ಬಂದನು. ಅಲ್ಲಿ ಗುರುದೇವನು ಮೂರು ವರ್ಷಗಳವರೆಗೆ ವಾಸ್ತವ್ಯ ಮಾಡಿದನೆಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದನೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ 5ನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment