ಶ್ರೀ ದತ್ತಾತ್ರೇಯಾಷ್ಟಕ ಸ್ತೋತ್ರಮ್

 


ಶ್ರೀ ದತ್ತಾತ್ರೇಯಾಷ್ಟಕ ಸ್ತೋತ್ರಮ್

॥ಶ್ರೀ ದತ್ತಾತ್ರೇಯಾಯ ನಮಃ|

ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಪಾನಿಧಿಮ್ ಸರ್ವರೋಗಹರಂ ದೇವಂ ದತ್ತಾತ್ತೇಯಂ ಭಜೇವನಿಶಂ॥

(ಅಸ್ಯ ಶ್ರೀ ದತ್ತಾತ್ರೇಯ ಸ್ತೋತ್ರ ಮಂತ್ರಸ್ಯ ಭಗವಾನ್ನಾರದ ಋಷಿಃ| ಅನುಷ್ಟಪ್ ಛಂದಃ ಶ್ರೀ ದತ್ತ ಪರಮಾತ್ಮ ದೇವತಾ। ಶ್ರೀ ದತ್ತ ಪ್ರೀತ್ಯರ್ಥ ಜಪೇ ವಿನಿಯೋಗಃ)

ಜಟಾಧಾರಿಯೂ, ಶೂಲಧಾರಿಯೂ, ದಯಾಸಾಗರನೂ, ಸಕಲ ರೋಗಗಳನ್ನೂ ಪರಿಹರಿಸುವವನೂ ಆದ ದತ್ತಾತ್ರೇಯನೆ! ನಿನಗೆ ನಮಸ್ಕಾರ

(ಈ ಸ್ತೋತ್ರಕ್ಕೆ ನಾರದರೇ ಋಷಿಗಳು. ಇದು ಅನುಷ್ಟಪ್ ಛಂದಸ್ಸಿನಲ್ಲಿ ರಚಿತವಾಗಿದೆ. ದತ್ತಾತ್ರೇಯನೇ ಈ ಸ್ತೋತ್ರದ ಆರಾಧ್ಯ ದೇವತೆ, ಆತನ ಪ್ರೀತ್ಯರ್ಥವಾಗಿ ಜಪಿಸಬೇಕು.)

ಜಗದುತ್ಪತ್ತಿ ಕರ್ತೇಚಸ್ಥಿತಿ ಸಂಹಾರ ಹೇತವೇ। 
ಭವಪಾಠ ವಿಮಕ್ತಾಯ ದತ್ತಾತ್ರೇಯ ನಮೋಸ್ತುತೇ ||೧||

ಈ ಜಗತ್ತಿನ ಸೃಷ್ಟಿಕರ್ತನೂ, ಪಾಲಕನೂ, ಸಂಹಾರಕನೂ, ಸಂಸಾರವೆಂಬ ಪಾಶದಿಂದ ಬಿಡುಗಡೆ ಮಾಡುವವನೂ ಆದ ಹೇ ದತ್ತಾತ್ರೇಯ! ನಿನಗೆ ನಮನ.

ಜರಾಜನ್ಮ ವಿನಾಶಾಯ ದೇಹಶುದ್ಧಿ ಕರಾಯ ಚ |
ದಿಗಂಬರ ದಯಾಮೂರ್ತೆ ದತ್ತಾತ್ರೇಯ ನಮೋಸ್ತುತೇ ||೨||

ಮುಪ್ಪು, ಜನನಗಳನ್ನು ನಿವಾರಿಸಿ, ದೇಹವನ್ನು ಪವಿತ್ರಗೊಳಿಸುವ, ದಿಗಂಬರನೂ, ದಯಾರೂಪಿಯೂ ಆದ ಹೇ ದತ್ತಾತ್ರೇಯ! ನಿನಗೆ ನಮಸ್ಕಾರ.

ಕರ್ಪೂರ ಕಾಂತಿ ದೇಹಾಯ ಬ್ರಹ್ಮಮೂರ್ತಿ ಧರಾಯಚ |
ವೇದಶಾಸ್ತ್ರ ಪರಿಜ್ಞಾಯ ದತ್ತಾತ್ರೇಯ ನಮೋಸ್ತುತೇ ||೩||

ಕರ್ಪೂರದಂತೆ ಶುದ್ಧ ಶ್ವೇತಕಾಂತಿಯ ದೇಹದ, ಬ್ರಹ್ಮ ರೂಪಿಯಾದ, ವೇದಾದಿ ಶಾಸ್ತ್ರ ಪರಿಣತನಾದ ಹೇ ದತ್ತಾತ್ರೇಯನೇ] ನಿನಗೆ ವಂದನೆ.

ಪ್ರಸ್ವ ದೀರ್ಘ ಕೃಶಸ್ತೂಲ ನಾಮಗೋತ್ರ ವಿವರ್ಜಿತೇ |
ಪಂಚಭೂತೈಕ ದೀಪ್ತಾಯ ದತ್ತಾತ್ರೇಯ ನಮೋಸ್ತುತೇ ||೪||

ಸಣ್ಣ, ದೊಡ್ಡ ರೂಪಗಳು, ಹೆಸರು, ಗೋತ್ರಗಳ ಮಿತಿಗೆ ಸಿಲುಕದ, ಪಂಚಭೂತಗಳನ್ನೇ ಸೃಜಿಸಿದ ದತ್ತಾತ್ರೇಯನಿಗೆ ನಮಸ್ಕಾರ.

ಯಜ್ಞಭೋಕೇಚ ಯಜ್ಞಾಯ ಯಜ್ಞ ರೂಪಧರಾಯ ಚ। 
ಯಜ್ಞ ಪ್ರಿಯಾಯ ಸಿದ್ಧಾಯ ದತ್ತಾತ್ರೇಯ ನಮೋಸ್ತುತೇ ||೫||

ಯಜ್ಞಗಳ ಹವಿಸ್ಸನ್ನು ಸ್ವೀಕರಿಸುವ ಯಜ್ಞರೂಪಿಯೂ, ಯಜ್ಞಪ್ರಿಯನೂ, ತಪೋನಿರತನೂ ಆದ ದತ್ತಾತ್ರೇಯನೇ ನಿನಗೆ ನಮನ.

ಅದೌ ಬ್ರಹ್ಮಾ ಮಧ್ಯೆ ವಿಷ್ಣುರಂತೇ ದೇವಃ ಸದಾಶಿವಃ |
ಮೂರ್ತಿತ್ರಯ ಸ್ವರೂಪಾಯ ದತ್ತಾತ್ರೇಯ ನಮೋಸ್ತುತೇ ||೬||

ಮೊದಲು ಬ್ರಹ್ಮ, ಮಧ್ಯದಲ್ಲಿ ವಿಷ್ಣು, ಕೊನೆಯಲ್ಲಿ ಮಹೇಶ್ವರ ರೂಪಿಯಾದ ದತಾತ್ರೇಯನೆ ನಿನಗೆ ನಮಸ್ಕಾರ.

ಭೋಗಾಲಯಾಯ ಭೋಗಾಯ ಯೋಗ ಯೋಗ್ಯಾಯಧಾರಿಣೇ |
ಜಿತೇಂದ್ರಿಯ ಜಿತಜ್ಞಯ ದತ್ತಾತ್ರೇಯ ನಮೋಸ್ತುತೇ||೭||

ಬೋಧರೂಪನೂ, ಯೋಗ ರೂಪಿಯೂ, ಜಿತೇಂದ್ರಿಯನ, ಜ್ಞಾನಿಯೂ ಆದ ದತ್ತಾತ್ರೇಯನೆ! ನಿನಗೆ ನಮನಗಳು.

ಸಮೋದಿತ ದಿವ್ಯಾಯ ದಿವ್ಯ ರೂಪಧರಾಯ ಚ |
ಪರಬ್ರಹ್ಮ ದತ್ತಾತ್ರೇಯ ನಮೋಸ್ತುತೇ ||೮||

ದಿವ್ಯ ಮಂಗಳ ರೂಪನೂ, ಪರಮಾತ್ಮನೂ ಆದ ದತ್ತಾತ್ರೇಯನಿಗೆ ವಂದನೆ.

ಜಂಬೂದ್ವೀಪೇ ಮಹಾಕ್ಷೇತ್ತೇ ಮಾತಾಪುರ ನಿವಾಸಿನೇ|
ಜಯಮಾನ ಸತಾಂದೇವ ದತ್ತಾತ್ರೇಯ ನಮೋಸ್ತುತೇ||೯||

ಭರತಖಂಡದ ಜಂಬೂದ್ವೀಪದ ಮಾತಾಪುರದಲ್ಲಿ ನೆಲೆಸಿರುವ ದತ್ತಾತ್ರೇಯನೆ ನಿನಗೆ ನಮಸ್ಕಾರ!

ಭಿಕ್ಷಾಟನಂ ಗೃಹೇಗ್ರಾಮೇ ಪಾತ್ರ ಹೇಮಮಯಂಕರೇ। ನಾನಾಸ್ವಾದಮಯಾಭಿಕ್ಷಾ ದತ್ತಾತ್ರೇಯ ನಮೋಸ್ತುತೇ ||೧೦||

ತನ್ನ ಕೈಗಳಲ್ಲಿ ಸ್ವರ್ಣಮಯ ಭಿಕ್ಷಾಪಾತ್ರೆಯನ್ನು ಹಿಡಿದು ಗ್ರಾಮ, ಮನೆಗಳಲ್ಲಿ ನಾನಾ ಬಗೆಯ ಸ್ವಾದಿಷ್ಟ ಭಿಕ್ಷೆ ಸ್ವೀಕರಿಸುವ ದತ್ತಾತ್ರೇಯ, ನಿನಗೆ ನಮಸ್ಕಾರಗಳು.

ಬ್ರಹ್ಮಜ್ಞಾನ ಮಯಾಮುದ್ರಾ ವಸ್ತೇಚಾಕಾಶ ಭೂತಲೇ |
ಪ್ರಜ್ಞಾನ ಘನಬೋಧಾಯ ದತ್ತಾತ್ರೇಯ ನಮೋಸ್ತುತೇ ||೧೧||

ಜ್ಞಾನೋಪದೇಶಕ ಭಂಗಿಯ, ಆಕಾಶ-ಭೂಮಿಗಳಲ್ಲಿ ವ್ಯಾಪಿಸಿರುವ, ಜ್ಞಾನರೂಪಿಯಾದ ಹೇ ದತ್ತಾತ್ರೇಯ! ನಿನಗೆ ವಂದನೆಗಳು.

ಅವಧೂತ ಸದಾನಂದ ಪರಬ್ರಹ್ಮ ಸ್ವರೂಪಿಣೇ।
ವಿದೇಹದೇ ರೂಪಾಯ ದತ್ತಾತ್ರೇಯ ನಮೋಸ್ತುತೇ ||೧೨||

ಹೇ ಅವಧೂತ ಆನಂದರೂಪಿ ಪರಬ್ರಹ್ಮನೆ! ಶರೀರಿಯೂ, ಶರೀರರಹಿತನೂ ಆದ ಮಾಯಾರೂಪಿ ದತ್ತ ನಿನಗೆ ವಂದನೆಗಳು.

ಸತ್ಯರೂಪ ಸದಾಚಾರ ಸತ್ಯ ಧರ್ಮ ಪಾರಾಯಣ |
ಸತ್ಯಾಶ್ರಯ ಸದಾಧಾರ ದತ್ತಾತ್ರೇಯ ನಮೋಸ್ತುತೇ ||೧೩||

ಸತ್ಯರೂಪನೆ, ಧರ್ಮರೂಪಿಯೆ, ಸತ್ಯಕ್ಕೆ ಆಶ್ರಯನೆ, ಸರ್ವರಿಗೂ ಆಧಾರನೆ! ನಿನಗೆ ವಂದನೆಗಳು.

ಶೂಲ ಹಸ್ತ ಗದಾಪಾಣೇ ವನಮಾಲಾ ಸುಕಂಧರ |
ಯಜ್ಞ ಸೂತ್ರ ಪರಬ್ರಹ್ಮನ್ ದತ್ತಾತ್ರೇಯ ನಮೋಸ್ತುತೇ ||೧೪||

ಶೂಲ, ಅಭಯ, ಗದೆಗಳನ್ನು ತೋರಿಸಿ, ತುಳಸೀಮಾಲೆಯನ್ನು ಕಂಠದಲ್ಲಿ ಧರಿಸಿ, ಯಜ್ಯೋಪವೀತಧಾರಿ ದತ್ತನೆ ನಿನಗೆ ನಮನ.

ಕ್ಷರಾಕ್ಷರ ಸ್ವರೂಪಾಯ ಪರಾತ್ಪರ ತರಾಯ ಚ। 
ತ್ರಯೀ ಮೂರ್ತಿ ಸ್ವರೂಪಾಯ ದತ್ತಾತ್ರೇಯ ನಮೋಸ್ತುತೇ ||೧೫||

ಹೇ ಪರಮಾತ್ಮ ನೀನು ಸರ್ವರೂಪನು, ಪರಮಾತ್ಮನೂ, ತ್ರಿಮೂರ್ತಿಗಳ ಏಕರೂಪಿಯೂ ಆಗಿರುವೆ, ನಿನಗೆ ನಮನಗಳು.

ದತ್ತ ವಿತ್ತಾಡ್ಯ ಲಕ್ಷ್ಮೀ ದತ್ತ ಸ್ವಾತ್ಮ ಸ್ವರೂಪಿಣೇ।
ಗುಣ ನಿರ್ಗುಣ ರೂಪಾಯ ದತ್ತಾತ್ರೇಯ ನಮೋಸ್ತುತೇ ||೧೬||

ಹೇ ಲಕ್ಷ್ಮೀಪತಿ! ಸಗುಣ-ನಿರ್ಗುಣರೂಪಿಯೆ! ನಿನಗೆ ವಂದನೆ.

ಶತ್ರು ನಾಶಕರಂ ಸ್ತೋತ್ರಂ ಜ್ಞಾನ ವಿಜ್ಞಾನದಾಯಕಮ್ | 
ಸರ್ವ ಪಾಪಾಶಮಂ ಯಾಂತಿ ದತ್ತಾತ್ರೇಯ ನಮೋಸ್ತುತೇ||೧೭||

ಶತ್ರುಗಳನ್ನು ನಾಶಪಡಿಸಿ, ಜ್ಞಾನವನ್ನು ನೀಡಿ, ಸಕಲ ಪಾಪಗಳನ್ನು ಪರಿಹರಿಸುವ ಈ ಸ್ತೋತ್ರವನ್ನು ಪಠಿಸಿದರೆ ಸಕಲಾಭೀಷ್ಟಗಳೂ ದೊರೆತು, ದತ್ತ ದೇವನ ದರ್ಶನವಾಗುತ್ತದೆ.

ಇದಂ ಸ್ತೋತ್ರಂ ಮಹದ್ದಿವ್ಯಂ ದತ್ತ ಪ್ರತ್ಯಕ್ಷಕಾರಕಮ್ |
ದತ್ತಾತ್ರೇಯ ಪ್ರಸಾದಾಚ್ಚ ನಾರಾದೇನ ಪ್ರಕೀರ್ತಿತಮ್||೧೮||

ಈ ಸ್ತೋತ್ರವು ದತ್ತಾತ್ರೇಯ ಸ್ವಾಮಿಯ ದಯೆಯಿಂದ ನಾರದರಿಂದ ರಚಿತವಾಯಿತು. ಎಂಬಲ್ಲಿಗೆ ಶ್ರೀ ದತ್ತಾತ್ರೇಯ ಸ್ತೋತ್ರದ ತಾತ್ಪರ್ಯ ಮುಗಿಯಿತು.

ಇತಿ ಶ್ರೀ ದತ್ತಾತ್ರೇಯಾಷ್ಟಕ ಸ್ತೋತ್ರಂ ಸಂಪೂರ್ಣಂ

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane