Biduvenenayya Hanuma lyrics in kannada



ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ || ಪ ||

ಬಿಡುವೆನೇನೋ ಹನುಮ ನಿನ್ನ ಅಡಿಗಳಿಗೆ ಶಿರವ ಬಾಗಿ
ದೃಡ ಭಕ್ತಿ ಸುಜ್ಞಾನವನ್ನು ತಡಮಾಡದೆ ನೀ ಕೊಡುವ ತನಕ || ಪ ||

ಹಸ್ತವ ಮೇಲಕ್ಕೆತ್ತಿತರೆನು | ಹಾರಿಗ್ಗಾಲು ಹಾಕಿದರೇನು||
ಭೃತ್ಯನು ನಿನ್ನವನು ನಾನು | ಹಸ್ತಿವರದನ ತೋರುವ ತನಕ || ೧ ||

ಡೊಂಕು ಮಾರಿ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ ||
ಕಿಂಕರನೋ ನಿನ್ನವನು ನಾನು ಪಂಕಜನಾಭನ ತೋರುವ ತನಕ || ೨ ||

ಹಲ್ಲು ಮುಡಿಯ ಕಚ್ಚಿದರೇನು |ವಾರಿ ಧುಮುಕಿದರಂಜುವನಲ್ಲ | 
ಫುಲ್ಲನಾಭ ಶ್ರೀ ಪುರಂಧರ ವಿಠಲನ | ಇಲ್ಲಿಗೆ ತಂದು ತೋರುವ ತನಕ || ೩ ||


Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane