Bandalu Bandalu Sharada Mathe lyrics



ಪಟ್ಟೆ ಪೀತಾಂಬರ ಸೀರೆಯನುಟ್ಟು
ಮಿರಿ ಮಿರಿ ಮಿರುಗುವ ಕುಪ್ಪಸ ತೊಟ್ಟು |
ಹಣೆಯಲ್ಲಿ ಕಸ್ತೂರಿ ತಿಲಕವಿಟ್ಟು
ತಲೆಯಲ್ಲಿ ಜಡೆ ಬಲೆ ನಾಗರವಿಟ್ಟು ||

ಬಂದಳು ಬಂದಳು ಶಾರದಾಮಾತೆ
ಬಂದಳು ಬಂದಳು ಶಾರದಾಮಾತೆ
ಬಂದಳು ಬಂದಳು ಶಾರದಾಮಾತೆ 
ಭಕ್ತರ ಬಯಕೆಯ ಸಲಿಸುವದಾತೆ ||

ಕಿವಿಯಲ್ಲಿ ವಜ್ರದ ಓಲೆಯನಿಟ್ಟು
ಮೂಗನು ತುಂಬುವ ಮುಗುತಿಬೊಟ್ಟು 
ಕೊರಳಲಿ ರತ್ನಹಾರ ಪದಕವನಿಟ್ಟು 
ಟೊoಕದಿ ಬಂಗಾರ ದೊಡ್ಯಣವಿಟ್ಟು || ಬಂದಳು||

ಕಾಲರಿ ಝಣ ಝಣ ನೂಪುರ ಕಟ್ಟು
ಕಡಗ ಮಿಂಚು ತಾಳಿ ಮಿರುಗುವ ಗುಟ್ಟು
ಶಂಕರ ಸ್ತುತಿಗೆ ಮನವನು ಕೊಟ್ಟು
ಶೃಂಗೇರಿ ಕ್ಷೇತ್ರದಿ ನೆಲಸಿದ ನಿಟ್ಟು || ಬಂದಳು||

ಹಸ್ತದಿ ವೀಣಾ ಪುಸ್ತಕ ಪಾಣಿ
ಜಗವನು ಸೃಷ್ಟಿಪ ಬ್ರಹ್ಮನ ರಾಣಿ
ಕಾಶ್ಮೀರವಾಸಿನಿ ಕಳಾಹಿ ವೇಣಿ
ವಾಣಿ ಶಾರದೆ ಪರಮ ಕಲ್ಯಾಣಿ || ಬಂದಳು||

ವಿದ್ಯಾಮಾತೆ ಬುದ್ಧಿ ಪ್ರದಾತೆ
ಕಾಣೆನು ನಿನಗೆನೆ ಲೋಕದ ಮಾತೆ
ನಾಲಿಗೆಯಲ್ಲಿ ನಿಂತು ನುಡಿಸುವ ಮಾತೆ
ವೇದ ವಾಕ್ಯವಾದು ನಿನ್ನಯ ಗೀತೆ || ಬಂದಳು||

ಅನುದಿನ ನಿನ್ನನು ಸ್ಮರಿಪೆನು ತಾಯೆ
ಘನಕರ ವಿದ್ಯೆಯ ತಾಯೆನ್ನ ತಾಯೆ
ಶಾರದ ಮಾತೆ ಸುಜನ ಸುಪ್ರೀತೆ
ವಂದಿಪೆ ನಿನಗೆ ಭಾಗ್ಯವಿದಾತೆ || ಬಂದಳು||

ಬಂದಳು ಬಂದಳು ಶಾರದಾಮಾತೆ
ಬಂದಳು ಬಂದಳು ಶಾರದಾಮಾತೆ
ಶೃಂಗೇರಿ ಕ್ಷೇತ್ರದಿ ನೆಲೆಸಿದ ಮಾತೆ
ನರಸಿಂಗನಾ ಸೊಸೆ ಭೀಮೇಶ ವಿನುತೆ ||ಬಂದಳು||


Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane