Ide Mahamantra lyrics



ಇದೇ ಮಹಾಮಂತ್ರ
ಪರಮ ದಿವ್ಯಮಂತ್ರ
ಪರಮಾತ್ಮನ ಧ್ಯಾನ ಈ ಮಂತ್ರ ||

ನಂದಿ ಭೃoಗಿ ನಂಬಿದ ಮಂತ್ರ
ಹರಗಣವು ಹಾಡಿದ ಮಂತ್ರ
ಷಣ್ಮುಖನು ಸಾರಿದ ಮಂತ್ರ
ಗಣಪತಿಯು ಜಪಿಸಿದ ಮಂತ್ರ
ಪರಮಭಾಗ್ಯ ನೀಡುವಂತ 
ಅಂದದ ಶಿವನ ಚೆಂದದ ಮಂತ್ರ||

ಮನಕೆ ಶಾಂತಿ ತುಂಬುವ ಮಂತ್ರ
ಜ್ಞಾನದರಿವ ತಿಳಿಸೋ ಮಂತ್ರ
ಬಾಳದಾರಿ ಬೆಳೆಗಿಪ ಮಂತ್ರ
ಲೀಲೆತೋರಿ ಕಾಯುವ ಮಂತ್ರ
ಪಂಚಾಕ್ಷರದ ಮಹಿಮೆಯ ಸಾರಿ
ಜನರಿಗೆ ವರವನು ಕೊಡುವ ಮಂತ್ರ ||

ಭಕ್ತಿಭಾವ ನೀಡುವ ಮಂತ್ರ 
ಮುಕ್ತಿಮಾರ್ಗ ತೋರುವ ಮಂತ್ರ
ಭಕ್ತಜನಕೆ ಒಲಿಯುವ ಮಂತ್ರ
ಶಕ್ತಿಶಿವನ ತಾರಕ ಮಂತ್ರ
ಬೆಲಗೂರು ಹನುಮನ ಜಪಿಸುವಂತ
ನಮಃ ಶಿವಾಯ ಎನ್ನುವ ಮಂತ್ರ ||






Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane