Muttu Pacche Kempu Rathna Havaladaarathi lyrics
ಮುತ್ತು ಪಚ್ಚೆ ಕೆಂಪು ರತ್ನ ಹವಳದಾರತಿ
ಮತ್ತೆ ಮತ್ತೆ ಬೆಳಗುವೇನು ವಜ್ರದಾರತಿ
ಮತ್ತೆ ಮತ್ತೆ ಬೆಳಗುವೇನು ವಜ್ರದಾರತಿ
ವಜ್ರದಾರತಿ ನಿನಗೆ ವಜ್ರದಾರತಿ
ಮುತ್ತಿನಂತ ಹೊಳೆಯುತಿಹ ಮುಕ್ತಿ ಪಥವ ತೋರುತಿಹ
ಶಕ್ತಿ ನಿನಗೆ ಪಾದುತಲಿ ಬೆಳಗುವೆ ನಾನಾರತಿ||
ಭುವನೇಶ್ವರಿ ಜಗದೀಶ್ವರಿ ಬನಶಂಕರಿ ನಿನಗೆ
ಭಕ್ತಿ ಪ್ರೇಮದಿಂದಲಿ ಬೆಳಗುವೆ ನಾನಾರತಿ
ಭೈರವಿ ಶಾಂಭವಿ ಜಾಹ್ನವಿ ನಿನಗೆ
ಆತ್ಮ ಜ್ಯೋತಿ ಯಿದಲಿ ಬೆಳಗುವೆ ನಾನಾರತಿ ||
ದೇವಿ ಶಾರದಾಂಬೆಯ ಚರಣ ದಾಸಿ ವಂದಿಸುವ
ಭವ್ಯ ದಿವ್ಯ ರೂಪಿಣಿ ರಾಜಾರಾಜೆಶ್ವರಿ
ಚಿತ್ತದಲ್ಲಿ ನೆಲೆಸಿರುವ ಚಿದ್ರೂಪಿಣಿ ನಿನಗೆ
ಚಿನ್ನದ ಹರಿವಾಣದಲಿ ಬೆಳಗುವೆ ನಾನಾರತಿ ||
Comments
Post a Comment