Om Namah Shivaya lyrics
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಓಂ ನಮಃ ಶಿವಾಯ ಓಂ ನಮಃ ಶಿವಾಯ ||
ಓಂ ನಮಃ ಶಿವಾಯ ಓಂ ನಮಃ ಶಿವಾಯ ||
ಒಂದು ದಳದ ಕಮಲದಲ್ಲಿ ಉದಯವಾದ ಲಿಂಗವೇ
ಮೂರು ಕಣ್ಣು ಲಿಂಗವೇ ಸತ್ಯಸರ್ವ ಲಿಂಗವೇ ||
ಎರಡು ದಳದ ಕಮಲದಲ್ಲಿ ಎದ್ದು ಬಂದ ಲಿಂಗವೇ
ಏಕಂಬರ ಲಿಂಗವೇ ಏಕಜ್ಯೋತಿ ಲಿಂಗವೇ ||
ಮೂರು ದಳದ ಕಮಲದಲ್ಲಿ ಮೂಡಿ ಬಂದ ಲಿಂಗವೇ
ಮೂರು ಕಣ್ಣು ಲಿಂಗವೇ ಮುಕ್ತಿದಾತ ಲಿಂಗವೇ ||
ನಾಲ್ಕು ದಳದ ಕಮಲದಲ್ಲಿ ನಲಿದು ಬಂದ ಲಿಂಗವೇ
ನಾಗಾಭರಣ ಲಿಂಗವೇ ನಾಟ್ಯಜ್ಯೋತಿ ಲಿಂಗವೇ ||
ಐದು ದಳದ ಕಮಲದಲ್ಲಿ ಐಕ್ಯವಾದ ಲಿಂಗವೇ
ಅಮರಜ್ಯೋತಿ ಲಿಂಗವೇ ಆತ್ಮಜ್ಯೋತಿ ಲಿಂಗವೇ ||
ಆರು ದಳದ ಕಮಲದಲ್ಲಿ ಅರಲಿ ಬಂದ ಲಿಂಗವೇ
ಹರನಶಕ್ತಿ ಲಿಂಗವೇ ಪ್ರಾಣಶಕ್ತಿ ಲಿಂಗವೇ ||
ಎಳು ದಳದ ಕಮಲದಲ್ಲಿ ಇಳಿದು ಬಂದ ಲಿಂಗವೇ
ದಿವ್ಯಾಂಬರ ಲಿಂಗವೇ ದಿವ್ಯಜ್ಯೋತಿ ಲಿಂಗವೇ ||
ಎಂಟು ದಳದ ಕಮಲದಲ್ಲಿ ಅಂಟಿ ಬಂದ ಲಿಂಗವೇ
ಗಂಗಾಧರ ಲಿಂಗವೇ ಘಂಟಾನಾದ ಲಿಂಗವೇ ||
ಒಂಬತ್ತು ದಳದ ಕಮಲದಲ್ಲಿ ಒಲಿದು ಬಂದ ಲಿಂಗವೇ
ಓಂಕಾರ ಲಿಂಗವೇ ಓಂನಾದ ಲಿಂಗವೇ ||
ಹತ್ತು ದಳದ ಕಮಲದಲ್ಲಿ ಹತ್ತಿ ಬಂದ ಲಿಂಗವೇ
ಅರುಣರೂಪ ಲಿಂಗವೇ ಹವಳದಂಥ ಲಿಂಗವೇ ||
Comments
Post a Comment