Gajacharmabara Gowri Mahesha / aarthi song on Lord Shiva
ಗಜಚರ್ಮಾಂಬರ ಗೌರಿಮಹೇಶಗೆ ಬೆಳಗುವೆ ಮಂಗಳದಾರತಿಯ ।|
ಗಣಪತಿ ಪಿತ ಸತಿ ಪಾರ್ವತಿ ಪತಿಗೆ ಬೆಳಗುವೆ ಮಂಗಳದಾರತಿಯ ।।ಗಜ।।
ಶಿವಶಂಕರ ಹರ ವರ ಗಂಗಾಧರ ನಟ ವರ ಈಶ್ವರಗೆ
ರುದ್ರ ಭಯಂಕರ ಶಿವ ಅಭಯಂಕರ ಗಿರಿಜಾ ವಲ್ಲಭಗೆ।।ಗಜ।।
ದುಷ್ಟರ ಗೆಲಿದು ಶಿಷ್ಟರಿಗೊಲಿದು ತಾಂಡವಗೈದವಗೆ
ಡಮರು ತ್ರಿಶೂಲ ಉರಗವ ಧರಿಸಿದ ನಂಜುಂಡೇಶನಿಗೆ।।ಗಜ।।
Comments
Post a Comment