Mangalam Gurushri lyrics



ಮಂಗಳಂ ಗುರುಶ್ರೀ ಚಂದ್ರಮೌಳೀಶ್ವರಗೆ 
ವರಶಕ್ತಿ ಗಣಪತಿ ಶಾರದಾಂಬೆಗೆ ಶಂಕರಾಚಾರ್ಯರಿಗೆ || ಪ ||

ಕಾಲ ಭೈರವಗೆ ಕಾಳೀ ದುರ್ಗಿಗೆ |
ಧೀರ ವೀರ ಶೂರ ಹನುಮ ಮಾರುತಿ ಚರಣಕ್ಕೆ ||೧||

ವಿದ್ಯಾರಣ್ಯರಿಗೆ ವಿದ್ಯಾಶಂಕರಗೆ |
ವಜ್ರದೇಹ ಗುರುವಾಗೀಶ್ವರಗೆ ಆಂಜನೇಯನಿಗೆ ||೨||

ಮಲ್ಲಿಕಾರ್ಜುನಗೆ ಚಲ್ವ ಜನಾರ್ದನಗೆ | 
ಅಂಬಾ ಭವಾನಿ ಕಂಬದ ಗಣಪತಿ ಚಂಡಿಚಾಮುಂಡಿಗೆ ||೩||

ಬ್ರಹ್ಮಾನಂದರಿಗೆ ರಾಘವೇಂದ್ರರಿಗೆ |
ಗೋದಾವರಿಯ ತೀರದಲ್ಲಿ ನೆಲೆಸಿರುವಂತ ಬ್ರಹ್ಮಚೆತ್ಯನರಿಗೆ ||೪||

ತುಂಗ ಭದ್ರೆಗೆ ಶೃಂಗ ನಿವಾಸನಿಗೆ | 
ಶೃಂಗೇರಿಯಲ್ಲಿ ನೆಲಸಿರುವಂತ ಶಾರದಾಂಬೆಗೆ ||೫||

ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತಿಗೆ |
ಚಂದ್ರಶೇಖರ ಭಾರತೀ ಗುರು ಸಾರ್ವಭೌಮರಿಗೆ|
ಚಂದ್ರಶೇಖರ ಭಾರತೀ ಗುರು ವಿದ್ಯಾತೀರ್ಥರಿಗೆ |
ಚಂದ್ರಶೇಖರ ಭಾರತೀ ಗುರು ಭಾರತೀ ತೀರ್ಥರಿಗೆ |
ಚಂದ್ರಶೇಖರ ಭಾರತೀ ಗುರು ವಿಧುಶೇಖರಭಾರತಿಗೆ || ೬||

ತತ್ವ ಜ್ಞಾನರಿಗೆ ಸತ್ಯಶೀಲರಿಗೆ |
ಭಕ್ತಿಯಿಂದಲಿ ನಿತ್ಯವು ಬರುವ ಶಿಷ್ಯವೃಂದಕ್ಕೆ ||೭||



Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane