Shri Vani Kalyani / Saraswati devotional song
ಶ್ರೀವಾಣಿ ಕಲ್ಯಾಣಿ ಗುಣಮಣಿ ಲೋಕ ಜನನಿಯೆ ನಮಿಸುವೆವು
ಕೋಕಿಲವಾಣಿ ಫಣಿಸಮವೇಣಿ ವೀಣಾ ಪುಸ್ತಕಪಾಣಿಯೆ ||
ಮಯೂರವಾಹನೆ ಮರಾಳೆಗಮನೆ
ಸುರನರ ಕಿನ್ನರ ರುತಚರಣೆ
ತೋಯಜನಯನೆ ಸರಸಿಜವದನೆ
ಭಾರತಿ ಶಂಕರಿ ಹೃದಸದನೆ ||
ವಿಧ್ಯಾಧೀಶ್ವರಿ ವಿಧಿ ಪ್ರಾಣೇಶ್ವರಿ
ವರದಾ ಭಯಂಕರಿ ಶುಭಕರಿ
ವಿಧ್ಯಾ ಬುದ್ಧಿ ನೀ ಪಾಲಿಸು
ಮುದ್ದು ಕುಮಾರರ ಕರುಣಿಸು ||
ಮಂದಮತಿಗಳ ಎಮ್ಮಯ ಬಿನ್ನಪ
ಅನುನೀo ಮನದೊಳು ದಯೆಗೈದು
ಕುಂದುಗಳಲ್ಲವ ಚೆಂದದಿ
ಕಳೆಯುತ ಇಂದುವದನೆಯೆ ಪಾಲಿಸು ||
Comments
Post a Comment