Mahashivaratri (Part 2)
ಇವತ್ತಿನ ಪೋಸ್ಟ್ನಲ್ಲಿ ಶಿವರಾತ್ರಿ ಹಬ್ಬದ ಆಚರಣೆ ಹಿನ್ನೆಲೆ ಹಾಗೂ ವಿಧಾನ ಹೇಳುತಿನಿ.
ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶಿವತತ್ತ್ವದ ಲಾಭವು ಹೆಚ್ಚು ಪ್ರಮಾಣದಲ್ಲಿ ಸಿಗಲು ಮಹಾಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ ಆರ್ಚನೆಯನ್ನು ಮಾಡಬೇಕು. ಅದರೊಂದಿಗೆ ಓಂ ನಮಃ ಶಿವಾಯ' ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು, ಈ ದಿನದಂದು ಓಂ ನಮಃ ಶಿವಾಯ' ಈ ನಾಮಜಪವನ್ನು ಮಾಡುವ ಜೀವಕ್ಕೆ ಶಿವನ ಸೂಕ್ಷ್ಮ ಶಕ್ತಿ ಸಿಗುತ್ತದೆ, ಶಿವನ ಜನ್ಮವು ಸ್ಕೂಲ ಮತ್ತು ಸೂಕ್ಷ್ಮ ರೂಪದ ಕೆಟ್ಟ ಶಕ್ತಿಗಳನ್ನು ನಾಶ ಮಾಡಲು ಮತ್ತು ಮಾನವನ ಕಲ್ಯಾಣಕ್ಕಾಗಿ ಅಗಿದೆ.
ಶಿವರಾತ್ರಿ ಆಚರಣೆಯ ಹಿನ್ನಲೆ
ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ, ಮಾಘ ಬಹುಳ ಚತುರ್ದಶಿಯ ರಾತ್ರಿಯೇ ಶಿವ ಪಾರ್ವತಿಯನ್ನು ವರಿಸಿದ್ದನಂತೆ. ಹೀಗಾಗಿ ಅಂದು ರಾತ್ರಿ ದೇವಾನು ದೇವತೆಗಳೆಲ್ಲರೂ ಜಾಗರಣೆ ಮಾಡಿ, ಗಿರಿಜಾ ಕಲ್ಯಾಣ ವೀಕ್ಷಿಸಿ, ಶಿವಪಾರ್ವತಿಯರಿಬ್ಬರನ್ನೂ ಪೂಜಿಸಿದರಂತೆ. ಹೀಗಾಗಿಯೇ ಜಾಗರಣೆ ಪದ್ಧತಿ ಆಚರಣೆಗೆ ಬಂದಿದೆ ಎನ್ನಲಾಗುತ್ತದೆ.
ಪ್ರತಿ ಸಂವತ್ಸರದಲ್ಲಿ, ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು, ರಾತ್ರಿ ವೇಳೆಯಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿಯಂದು ರಾತ್ರಿಯ ವೇಳೆಯಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ. ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ರೋಕ್ತಿ ಇದೆ.
ವ್ರತವನ್ನಾಚರಿಸುವ ಪದ್ಧತಿ
ಉಪವಾಸ, ಪೂಜೆ ಮತ್ತು ಜಾಗರಣೆ ಇವು ಈ ವ್ರತದ ಮೂರು ಅಂಗಗಳಾಗಿವೆ.
ಉಪವಾಸದ ವಿಧಾನ
ಶಿವರಾತ್ರಿಯಂದು ಭಕ್ತರು ನಿರಾಹಾರ ವ್ರತ ಕೈಗೊಳ್ಳುತ್ತಿದ್ದರೆ ಅಕ್ಕಿ, ಗೋಧಿ ಅಥವಾ ಯಾವುದೇ ಧಾನ್ಯಗಳಿಂದ ತಯಾರಿಸಿದ ಆಹಾರ ಸೇವಿಸುವಂತಿಲ್ಲ. ನಿರಾಹಾರ ವ್ರತ ಆಚರಿಸುತ್ತಿಲ್ಲ ಎಂದಾದರೆ ಹಾಲು, ಹಣ್ಣು ಮಾತ್ರ ಸೇವಿಸಿ ಶಿವನ ಧ್ಯಾನ ಮಾಡುವುದು ಪದ್ಧತಿ, ಮುಖ್ಯವಾಗಿ ಮನಸ್ಸು ಏಕಾಗ್ರತೆ ಹೊಂದಬೇಕಾದರೆ ಖಾಲಿ ಹೊಟ್ಟೆಯಿಂದಿರಬೇಕು. ಆಧ್ಯಾತ್ಮ ಸಾಧನೆಗೆ ಉಪವಾಸವೇ ಮೊದಲ ಮೆಟ್ಟಿಲು.
ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವ ಪತ್ರೆಯನ್ನು ಅರ್ಪಿಸಿ, ತಿಲಗಿ ಪುಷ್ಪ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಶಿವನ್ನು ಭಜಿಸಿದರೆ, ಪಾಪಗಳು ಪರಿಹಾರವಾಗುತ್ತವೆ, ಮೋಡಗಳೇ ಇಲ್ಲದ ಶುಭ್ರ ಅಕಾಶದಲ್ಲಿ ಬಂದಿರುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಅತ್ಯಂತ್ರ ಶ್ರೇಷ್ಠ ಎಂಬ ನಂಬಿಕೆಗಳಿವೆ. ಶಿವರಾತ್ರಿಯ ದಿನವಿಡೀ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಸಕಲ ಪಾಪಗಳೂ ಕಳೆಯುತ್ತವೆ ಎಂದು ನಂಬಲಾಗಿದೆ.
ಕೆಲವು ಭಕ್ತಿಗೀತೆಗಳು
ಕೆಲವು ಭಜನೆಗಳು
ಭಕ್ತಿಪ್ರಧಾನ ಕನ್ನಡ ಚಲನಚಿತ್ರಗಳು
ಶ್ರೀ ಮಂಜುನಾಥ
ಶಿವ ಲೀಲೆ
ಭಕ್ತ ಸಿರಿಯಾಳ
.....
ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು.
ನೀವು ಶಿವರಾತ್ರಿ ಹಬ್ಬ ಹೇಗೆ ಆಚರಿಸುತೀರ ಅಂತ ಕಾಮೆಂಟ್ ಮಾಡಿ.
Comments
Post a Comment