Radheshyam Radheshyam lyrics


ರಾಧೇಶ್ಯಾಮ್ ರಾಧೇಶ್ಯಾಮ್ |
ರಾಧಾಮಾಧವ ರಾಧೇಶ್ಯಾಮ್ || 

ಆದಿನಾರಾಯಣ ರಾಧೇಶ್ಯಾಮ್ |
ಅನಾದಿಪುರುಷ ಮೇಘಶ್ಯಾಂ |
ವಾಸುದೇವ ಹರಿ ರಾಧೇಶ್ಯಾಮ್ | 
ವಾಸುಕಿಶಯನನೆ ಮೇಘಶ್ಯಾಂ ||

ದೇವಕಿತನಯ ರಾಧೇಶ್ಯಾಮ್ | 
ದೇವದೇವಹರಿ ಮೇಘಶ್ಯಾಂ |
ಭಾವಜನಯ್ಯನೆ ರಾಧೇಶ್ಯಾಮ್ | 
ಗೋಗಳಪ್ರಿಯಹರಿ ಮೇಘಶ್ಯಾಂ ||

ಪೂತನಿಮರ್ಧನ ರಾಧೇಶ್ಯಾಮ್ |
ಶಕಟಸಂಹಾರಿ ಮೇಘಶ್ಯಾಂ |
ಮಾತುಳದ್ವoಸಿ  ರಾಧೇಶ್ಯಾಮ್|
ಅನಾಥರಕ್ಷಕ ಮೇಘಶ್ಯಾಂ || 

ಮುರುಳಿ ಮನೋಹರ ರಾಧೇಶ್ಯಾಮ್ | 
ನರಕಾಂತಹರಿ ಮೇಘಶ್ಯಾಂ |
ಕರುಣಾಕರ ಹರಿ ರಾಧೇಶ್ಯಾಮ್ | 
ಕರುಣಿಸಿ ಪೊರೆಹರಿ ಮೇಘಶ್ಯಾಂ ||

ಪಾಂಡವ ಪ್ರಾಣನೆ ರಾಧೇಶ್ಯಾಮ್ | 
ಪಾಂಡವ  ತ್ರಾಣನೆ ಮೇಘಶ್ಯಾಂ |
ಪಾಂಡವ ರಕ್ಷಕ ರಾಧೇಶ್ಯಾಮ್ | 
ಕೌರವಶಿಕ್ಷಕ ಮೇಘಶ್ಯಾಂ ||

ಗೋಪಿಜಾತನೆ ರಾಧೇಶ್ಯಾಮ್ | 
ಗೋಪಿನಾಥನೆ ಮೇಘಶ್ಯಾಂ |
ಗೋಪಿವಲ್ಲಭ ರಾಧೇಶ್ಯಾಮ್ |
ಗೋಕುಲನಂದನ ಮೇಘಶ್ಯಾಂ ||

ಶ್ರೀ ಪರಮೇಶನೆ ರಾಧೇಶ್ಯಾಮ್ | 
ಕೇಶವ ಅಚ್ಯುತ ಮೇಘಶ್ಯಾಂ |
ದೋಷಕ್ಷಮಿಸಿ ಪೊರೆ ರಾಧೇಶ್ಯಾಮ್ | 
ದಾಸಕೇಶವನಂತ ಮೇಘಶ್ಯಾಂ ||




Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane